ಡಾ.ಅನುಪಮಾ ಸ್ಮರಣಾರ್ಥ ಮಹಿಳಾ ಕವಿಗೋಷ್ಠಿ

7

ಡಾ.ಅನುಪಮಾ ಸ್ಮರಣಾರ್ಥ ಮಹಿಳಾ ಕವಿಗೋಷ್ಠಿ

Published:
Updated:

ಹುಬ್ಬಳ್ಳಿ: `55ಕ್ಕೆ ಬೇಕು ಕೋಲು

ಚಾಲೀಸಿಗೆ ಬೇಕು ಚಾಳೀಸು

ಮಕ್ಕಳಿಗೂ ಬೇಕು ಕನ್ನಡಕ

ಶತಕ ಬಾರಿಸಿದ ಮುದುಕಿಗೆ ಬೇಕಿಲ್ಲ ಕೋಲು

ಬೇಕೇ ಕೋಲು? ಎಂದು ಕೇಳಿದರೆ

ನಿನ್ನ ಹೊಡೆಯಲಿಕ್ಕೇನು ಎನ್ನುತ್ತಾಳೆ ತುಂಟ ಮುದುಕಿ...~ಇಂದಿನ ಮತ್ತು ಹಿಂದಿನವರ ಜೀವನ ಕ್ರಮದಲ್ಲಿ ಆದ ವ್ಯತ್ಯಾಸ ಹೇಗೆ ಜೀವನದ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಬುಧವಾರ ನಗರದಲ್ಲಿ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ ಬಿಚ್ಚಿಟ್ಟರು ಕವಯತ್ರಿ ಶಾಂತಾ ನಾಡಿಗೇರ.ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ `ಗೌರಮ್ಮ ಸುಬ್ರಾಯ ಮಾರನಾಡು ಸ್ಮಾರಕ ದತ್ತಿ~ ಕಾರ್ಯಕ್ರಮದಡಿ ಬುಧವಾರ ಏರ್ಪಡಿಸಿದ್ದ ಡಾ. ಅನುಪಮಾ ನಿರಂಜನ ಸ್ಮರಣೆ ಕಾರ್ಯ ಕ್ರಮದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ `ಅರಳು ಮರಳು~ ಎಂಬ ಕವಿತೆಯನ್ನು ವಾಚಿಸಿದ ಅವರು, ನಾವು ಕೆಲಸದಲ್ಲಿ ತೊಡಗಿಸಿಕೊಳ್ಳು ವುದರಿಂದ ನಮಗೆ ಎದುರಾಗುವ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂಬ ಆಶಯವನ್ನು ಈ ಕವಿತೆ ಮೂಲಕ ತಿಳಿಸಿದರು. ನಂತರ ಅನುಪಮಾ ನಿರಂಜನ ಅವರ ಬಗೆಗಿನ ಕವಿತೆಯನ್ನೂ ವಾಚನ ಮಾಡಿದರು.ಮುಗಿದರೆ ಸಾಕು ಪರೀಕ್ಷೆ ಶುರು ಫಲಿತಾಂಶದ ನಿರೀಕ್ಷೆ... ಎಂಬ ಸಾಲುಗಳನ್ನು ಹೊಂದಿದೆ `ಪರೀಕ್ಷಾ ಭೀತಿ~ ಎಂಬ ಕವಿತೆಯನ್ನು ಮನೋವಿಜ್ಞಾನಿಯೂ ಆಗಿರುವ ಲಕ್ಷ್ಮೀ ಬಿ.ಎನ್. ಪ್ರಸ್ತುತಪಡಿಸಿದರು. ಮಹೇಶ ದೇಶಪಾಂಡೆ ಅವರು ಬರೆದ ಪ್ರಶ್ನೋ ತ್ತರ ಎಂಬ ಕವನವನ್ನು ಮಾಧುರಿ ದೇಶಪಾಂಡೆ ಓದಿದರು. ಮಾಧುರಿ ಅವರೇ ಏಕೆ ಓದಿದರೆಂದರೆ ಅದು ಕೇವಲ ಮಹಿಳಾ ಗೋಷ್ಠಿ ಯಾಗಿದೆ ಎಂದು ನಿರೂಪಕಿ ಇದಕ್ಕೆ ಸಮಜಾಯಿಷಿ ನೀಡಿದರು. ಇನ್ನೂ ವಿಶೇಷವೆಂದರೆ ವೇದಿಕೆಯನ್ನು ಮಹಿಳೆಯರೇ ಅಲಂಕರಿಸಿದ್ದರು!ಕಾರ್ಯಕ್ರಮದ ನಿರೂಪಣೆಯನ್ನೂ ಮಾಡಿದ ಸಂಧ್ಯಾ ದೀಕ್ಷಿತ ತಲೆಶೂಲಿ ಎಂಬ ಕವಿತೆಯ ಮೂಲಕ ಎಷ್ಟೊಂದು ಹಣ ಖರ್ಚು ಮಾಡಿದರೂ ತಲೆಶೂಲಿ ನಿಲ್ಲುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು! ಗಾಯತ್ರಿ ದೇಶ ಪಾಂಡೆ ಅವರು ಹಾಡಿದ ಭಾವ ಮಂದಾರ ಎಂಬ ಸಿ.ಡಿ.ಯನ್ನು ಬಿಡು ಗಡೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry