ಬುಧವಾರ, ಅಕ್ಟೋಬರ್ 23, 2019
24 °C

ಡಾ.ಎಸ್.ಎಚ್. ಕಟ್ಟಿಗೆ 13ರಂದು ಕೈಗುಣ ಅರ್ಪಣೆ

Published:
Updated:

ಗುಲ್ಬರ್ಗ: ನಿವೃತ್ತಿಯ ಬಳಿಕವೂ ಸತತ 15 ವರ್ಷಗಳಿಂದ ಉಚಿತವಾಗಿ ವೈದ್ಯ ಸೇವೆ ನೀಡುತ್ತಿರುವ ಡಾ.ಎಸ್.ಎಚ್.ಕಟ್ಟಿ ಅವರ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ `ಕೈಗುಣ~ ಸಮರ್ಪಣಾ ಸಮಾರಂಭವು ಜ.13ರಂದು ಸಂಜೆ 5ಕ್ಕೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ.ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವ ಮೂಲಕ ಅಮೃತಮಹೋತ್ಸವ ಸಮಾರಂಭವನ್ನು ಉದ್ಘಾಟಿಸುಸುವರು. ಬೀದರ್ ಜಿಲ್ಲೆಯ ಕೌಠಾ(ಬಿ) ಸಂಸ್ಥಾನದ ಸಿದ್ದಾರಾಮ ಶರಣ ಬೆಲ್ದಾಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಗುಂಡಪ್ಪಾ ಚಿಲ್ಲರಗಿ ಪಾಲ್ಗೊಳ್ಳುವರು.ಅಮೃತ ಮಹೋತ್ಸವ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ, ಯಶ್ವಂತ ಹರಸೂರ, ನಿವೃತ್ತ ಎಸ್ಪಿ ಜಿ.ಎಂ.ಯಾತನೂರ, ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣಕುಮಾರ ಪಾಟೀಲ, ಬಸವಲಿಂಗಪ್ಪ ಆಲ್ದಾಳ, ಉಮಾದೇವಿ ದೊಡ್ಮನಿ, ಚಂದ್ರಕಾಂತ ಅಷ್ಟಗಿ, ಚಿದಾನಂದ ಕಡಗಂಚಿ ವೇದಿಕೆಯಲ್ಲಿ ಉಪಸ್ಥಿತರಿರುವರು.ಕಟ್ಟಿ-ಕೈಗುಣ: `ವ್ಯಕ್ತಿತ್ವ ಸ್ವಾಸ್ಥ್ಯದ ಬೆಳಕು~, `ಆರೋಗ್ಯ ಸ್ವಾಸ್ಥ್ಯದ ಬೆಳಕು~ ಮತ್ತು `ಸಾಮಾಜಿಕ ಸ್ವಾಸ್ಥ್ಯದ ಬೆಳಕು~ ಎಂಬ ಪ್ರಮುಖ ಮೂರು ಅಧ್ಯಾಯಗಳನ್ನು `ಕೈಗುಣ~ ಗ್ರಂಥವು ಹೊಂದಿದೆ. ಕಟ್ಟಿ ಅವರಿಂದ ಚಿಕಿತ್ಸೆ ಪಡೆದವರು, ಆಪ್ತರು, ಸಾಹಿತಿಗಳು ಲೇಖನಗಳನ್ನು ಬರೆದಿದ್ದಾರೆ ಎಂದು ಕೃತಿಯ ಪ್ರಧಾನ ಸಂಪಾದಕ ಪ್ರೊ.ವಸಂತ ಕುಷ್ಟಗಿ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ತಾಲ್ಲೂಕಿನ ಹೇರೂರದಲ್ಲಿ ಜನಿಸಿದ ಕಟ್ಟಿ, ಶಹಾಬಾದದಲ್ಲಿ ಬೆಳೆದರು. ಬಳಿಕ ಕ್ಷಯರೋಗ ನಿಯಂತ್ರಣ ಅಧಿಕಾರಿಯಾಗಿ ಗುಲ್ಬರ್ಗದಲ್ಲಿ ಸೇವೆ ಸಲ್ಲಿಸಿ, ಜನಜನಿತರಾದರು. ರಾಜ್ಯಪಾಲರ ಪ್ರಶಸ್ತಿಗೂ ಪಾತ್ರರಾದರು. 1996ರಲ್ಲಿ ನಿವೃತ್ತಿ ಹೊಂದಿದ ಬಳಿಕ ಜಿಡಿಎ ಬಡಾವಣೆಯ ಎಂ.ಎಸ್.ಕೆ. ಮಿಲ್ ರಸ್ತೆ ಬಳಿ ಸಿದ್ಧಾರ್ಥ ಮೆಡಿಸೆಂಟರ್ ಮೂಲಕ ರೋಗಿಗಳಿಗೆ ಉಚಿತ ಸೇವೆ ನೀಡುತ್ತಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಎಂ. ಯಾತನೂರ, ಬಸವಲಿಂಗಪ್ಪ ಆಲ್ದಾಳ ಮತ್ತು ಚಿದಾನಂದ ಕಡಗಂಚಿ ಇದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)