ಡಾ.ತಿಪ್ಪೇಸ್ವಾಮಿಗೆ ಸಾಹಿತ್ಯ ವಾಚಸ್ಪತಿ ಗೌರವ

7

ಡಾ.ತಿಪ್ಪೇಸ್ವಾಮಿಗೆ ಸಾಹಿತ್ಯ ವಾಚಸ್ಪತಿ ಗೌರವ

Published:
Updated:

ಮೈಸೂರು: ಹಿಂದಿ ಭಾಷೆ ಮತ್ತು ಸಾಹಿತ್ಯ ಸೇವೆಗೆ ಪ್ರಯಾಗ್ ಸಂಸ್ಥೆ ನೀಡುವ `ಸಾಹಿತ್ಯ ವಾಚಸ್ಪತಿ~ ಗೌರವ ಪದವಿಗೆ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಅವರು ಆಯ್ಕೆಯಾಗಿದ್ದಾರೆ.ಮಾರ್ಚ್ 18ರಿಂದ ಮೂರುದಿನ ಕನ್ಯಾಕುಮಾರಿಯಲ್ಲಿ ನಡೆಯಲಿರುವ 64ನೇ ವಾರ್ಷಿಕ ಅಧಿವೇಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಡಾ. ತಿಪ್ಪೇಸ್ವಾಮಿ ಅವರು ಹಿಂದಿ ಸಾಹಿತ್ಯ, ಹಿಂದಿ-ಕನ್ನಡ ಅನುವಾದ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಗೌರವ ಪದವಿ ನೀಡಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry