ಸೋಮವಾರ, ಮೇ 17, 2021
28 °C

ಡಾ.ಪಿ.ಬಿ. ಶ್ರೀನಿವಾಸ್ ಅಸ್ಥಿ ಕಾವೇರಿಯಲ್ಲಿ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಪಿ.ಬಿ. ಶ್ರೀನಿವಾಸ್ ಅಸ್ಥಿ ಕಾವೇರಿಯಲ್ಲಿ ವಿಸರ್ಜನೆ

ಶ್ರೀರಂಗಪಟ್ಟಣ: ಚೆನ್ನೈನಲ್ಲಿ ಏ. 14ರಂದು ನಿಧನರಾದ ಹೆಸರಾಂತ ಹಿನ್ನೆಲೆ ಗಾಯಕ ಡಾ.ಪಿ.ಬಿ. ಶ್ರೀನಿವಾಸ್ ಅವರ ಚಿತಾಭಸ್ಮವನ್ನು ಅವರ ಮಗ ನಂದಕಿಶೋರ್ ಮಂಗಳವಾರ ಇಲ್ಲಿಗೆ ಸಮೀಪದ ದೊಡ್ಡ ಗೋಸಾಯಿಘಾಟ್ ಬಳಿ ಕಾವೇರಿ ನದಿಯಲ್ಲಿ ವಿಸರ್ಜಿಸಿದರು.ಬೆಳಿಗ್ಗೆ 11.30ಕ್ಕೆ ಅಸ್ಥಿಯನ್ನು ವಿಸರ್ಜಿಸಲಾಯಿತು. ಪಿಬಿಎಸ್ ಅವರ ಮೂರನೇ ಪುತ್ರ, ಚೆನ್ನೈ ನಿವಾಸಿ ನಂದಕಿಶೋರ್ ಕಾವೇರಿ ನದಿಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿ ನಿಂತು ಅಸ್ಥಿ ವಿಸರ್ಜಿಸಿದರು. ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವಿ), ಪಿ.ಬಿ.ಎಸ್ ಅವರ ಕುಟುಂಬ ಸ್ನೇಹಿತ ರವೀಂದ್ರ ಗಿರಿಧರ್ ಇದ್ದರು.ಚೆನ್ನೈನಿಂದ ಇಲ್ಲಿಗೆ ತಂದ ಅಸ್ಥಿಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡ ಅಂತಿಮ ಹಿಂದೂ ಧಾರ್ಮಿಕ ಪದ್ಧತಿಯಂತೆ ವಿಧಿ, ವಿಧಾನಗಳನ್ನು ನೆರವೇರಿಸಿತು. ಕಟ್ಟೆಯ ಮೇಲೆ ಅಸ್ಥಿಯ ಕುಡಿಕೆ ಇರಿಸಿದ ನಂತರ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಇತರ ಕೈಂಕರ್ಯಗಳು ಜರುಗಿದವು. ನದಿಯ ದಂಡೆಯಲ್ಲಿ ಪ್ರಧಾನ ಪೂಜೆ ಸಲ್ಲಿಸದ ಬಳಿಕ ನದಿಗೆ ಇಳಿದು ಸೂರ್ಯ ಪ್ರಾರ್ಥನೆ ಸಲ್ಲಿಸಿದ ನಂದಕಿಶೋರ್ ತಂದೆ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸಿದರು. ವೇದ ಘೋಷಗಳನ್ನು ಪಠಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.