ಭಾನುವಾರ, ಮೇ 16, 2021
28 °C

ಡಾ.ರಾಜ್ ಪೀಠದ ದುಃಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರನಟ ಡಾ.ರಾಜಕುಮಾರ್ ಅವರು ಭೌತಿಕವಾಗಿ ನಮ್ಮನ್ನಗಲಿ ಆರು ವರ್ಷಗಳೇ ಆಗಿವೆ. ಆದರೆ ಕನ್ನಡಿಗರ ಜನ ಮಾನಸದಲ್ಲಿ  ಅವರ ನೆನಪು ಮಾಸದೆ ಉಳಿದಿದೆ. ರಾಜಕುಮಾರ್ ಅವರ ನೆನಪು ಹಾಗೂ ಕೊಡುಗೆಗಳನ್ನು ಸಾಕಾರಗೊಳಿಸಲು ಅಂದಿನ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿತ್ತು.ಅವುಗಳಲ್ಲಿ ಸ್ಮಾರಕ ನಿರ್ಮಾಣವೂ ಒಂದು. ಆದರೆ ಮಾಸ್ಟರ್ ಪ್ಲಾನ್ ಪ್ರಕಾರ ನಿಗದಿತ ಸಮಯದಲ್ಲಿ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇರುವುದು ನೋವಿನ ಸಂಗತಿ. 

ಅಂತೆಯೇ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ರಾಜಕುಮಾರ್ ಅವರನ್ನು ಕೇಂದ್ರೀಕರಿಸಿದಂತೆ ಉನ್ನತಮಟ್ಟದ ಸಂಶೋಧನೆ, ಅಧ್ಯಯನಗಳಿಗಾಗಿ ಒಂದು ಪೀಠವನ್ನು ಸರ್ಕಾರ ಸ್ಥಾಪಿಸಿತು. ಆರಂಭಿಕ ಮೊತ್ತವಾಗಿ ರೂ.15 ಲಕ್ಷಗಳನ್ನು (ಇಡುಗಂಟಾಗಿ) ಅನುದಾನ ನೀಡಿದ ಸರ್ಕಾರ ಅದನ್ನು ಹೆಚ್ಚಿಸಿಲ್ಲ. ಹೀಗಾಗಿ ವಾರ್ಷಿಕ ಅಲ್ಪ ಬಡ್ಡಿಯಲ್ಲಿ ಕಾರ್ಯಕ್ರಮ ಹಾಗೂ ಅಧ್ಯಯನದ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಎರಡು ಕೋಟಿ ರೂ ಅನುದಾನ ಮಂಜೂರು ಮಾಡಿ ಪೀಠ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸರ್ಕಾರ ಅನುವು ಮಾಡಿಕೊಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.