ಶುಕ್ರವಾರ, ನವೆಂಬರ್ 15, 2019
21 °C

ಡಾಲರ್ ಎದುರು ರೂಪಾಯಿ ಮೌಲ್ಯ ತಿಂಗಳಲ್ಲೇ ಕನಿಷ್ಠ

Published:
Updated:

ಮುಂಬೈ (ಪಿಟಿಐ): ಸತತ ಕುಸಿತ ಕಾಣುತ್ತಿರುವ ಷೇರುಪೇಟೆ ಹಾದಿಗೇ ಬಂದಿರುವ ರೂಪಾಯಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಗುರುವಾರ 44 ಪೈಸೆ ಮೌಲ್ಯ ಕಳೆದುಕೊಂಡಿತು. 1 ಡಾಲರ್‌ಗೆ ರೂ.54.87ರಷ್ಟು ಕಡಿಮೆ ವಿನಿಮಯ ಮೌಲ್ಯ ಪಡೆಯಿತು. ಇದು ಕಳೆದೊಂದು ತಿಂಗಳಲ್ಲಿಯೇ ರೂಪಾಯಿಯ ಕನಿಷ್ಠ ಮಟ್ಟದ ವಿನಿಮಯ ಬೆಲೆಯಾಗಿದೆ.ಚಾಲ್ತಿ ಖಾತೆ ಕೊರತೆ ಹೆಚ್ಚಳವೂ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. ಸದ್ಯದ ಅವಧಿಗೆ 1 ಡಾಲರ್ ಎದುರು ರೂ.54.50ರಿಂದ 55.30ರವರೆಗೂ ಏರಿಳಿತ ಕಾಣಲಿದೆ ಎಂದು `ಕೊಟಕ್ ಸೆಕ್ಯುರಿಟೀಸ್'ನ ವಿನಿಮಯ ವಿಶ್ಲೇಷಕ ಅನಿಂದ್ಯ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)