ಶನಿವಾರ, ಮೇ 8, 2021
26 °C

ಡಾಲರ್ ಎದುರು ರೂ ಮೌಲ್ಯ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ಅಪಮೌಲ್ಯ ಮುಂದುವರೆದಿದ್ದು, ಸೋಮವಾರದ ವಹಿವಾಟಿನಲ್ಲಿ 52 ಪೈಸೆಗಳಷ್ಟು  ಕುಸಿದಿದ್ದು,  ವಿನಿಮಯ ದರ  ರೂ47.78 ರಷ್ಟಾಗಿದೆ.ಬ್ಯಾಂಕುಗಳು ಮತ್ತು ಆಮದುದಾರರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್ ಬೇಡಿಕೆ ಹೆಚ್ಚಿದೆ. ಇದೇ ವೇಳೆ ರೂಪಾಯಿ ಮೌಲ್ಯ ಕುಸಿದ ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ  189 ಅಂಶಗಳಷ್ಟು ಇಳಿಕೆ ದಾಖಲಿಸಿದೆ.ಸೋಮವಾರ ಅಂತರ ಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ರೂ47.55/56ರಷ್ಟಾಗಿದೆ. ಕಳೆದ ವಾರಾಂತ್ಯದಲ್ಲಿ ಇದು ರೂ47.26/27ರಷ್ಟಿತ್ತು. ಸೆಪ್ಟೆಂಬರ್ 12ರಂದು 14 ತಿಂಗಳ ಹಿಂದಿನ ಮಟ್ಟ ರೂ47.22 ಕ್ಕೆ ಇಳಿದಿತ್ತು.ಆರ್ಥಿಕ ಬಿಕ್ಕಟ್ಟಿನಿಂದ ಹೂಡಿಕೆದಾರರ ಆತ್ಮವಿಶ್ವಾಸ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ,  ಕಳೆದ ಶುಕ್ರವಾರ ಅಮೆರಿಕ ಡಾಲರ್ ಎದುರು `ಯೂರೋ~ ಮೌಲ್ಯವೂ ಕುಸಿದಿತ್ತು.ಸೋಮವಾರ ಏಷ್ಯಾ ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳ ಕಚ್ಚಾ ತೈಲ ಪೂರೈಕೆ ಧಾರಣೆ ಪ್ರತಿ ಬ್ಯಾರಲ್‌ಗೆ 1.12 ಡಾಲರ್‌ಗಳಷ್ಟು ಕುಸಿದು 86.84 ಡಾಲರ್‌ಗಳಷ್ಟಾಗಿದೆ.ರಫ್ತುದಾರರಿಗೆ ಲಾಭ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ರಫ್ತುದಾರರಿಗೆ ಶುಭ ಸುದ್ದಿ. ವಿನಿಯಮ ಮೌಲ್ಯ ಹೆಚ್ಚುವುದರಿಂದ ರಫ್ತುದಾರರಿಗೆ ಹೆಚ್ಚಿನ ಲಾಭ ಲಭಿಸಲಿದೆ. ಆದರೆ, ಇದೇ ವೇಳೆ ಈ ಬೆಳವಣಿಗೆಯು ಸ್ಥಳೀಯ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಸೃಷ್ಟಿಸುವ ಸಾಧ್ಯತೆಇದೆ  ಎಂದು ಭಾರತೀಯ ರಫ್ತುದಾರರ ಒಕ್ಕೂಟದ  ಮಹಾನಿರ್ದೇಶಕ ಅಜಯ್ ಶಾಹಿ ಅಭಿಪ್ರಾಯಪಟ್ಟಿದ್ದಾರೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಕೇಂದ್ರಗಳಲ್ಲಿ ಡಾಲರ್ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.