ಡಾ. ಚಿ.ಮೂ ಕ್ಷಮೆಯಾಚನೆಗೆ ಆಗ್ರಹ

7

ಡಾ. ಚಿ.ಮೂ ಕ್ಷಮೆಯಾಚನೆಗೆ ಆಗ್ರಹ

Published:
Updated:

ಬೆಂಗಳೂರು: ‘ಟಿಪ್ಪು ಸುಲ್ತಾನ್ ಕುರಿತಾಗಿ ವ್ಯತಿರಿಕ್ತ ಹೇಳಿಕೆ  ನೀಡಿರುವ  ಸಂಶೋಧಕ  ಡಾ.ಎಂ ಚಿದಾನಂದ  ಮೂರ್ತಿ  ಅವರು  ಕ್ಷಮೆಯಾಚಿಸಬೇಕು’ ಎಂದು ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಅಹ್ಮದ್‌ ಖುರೇಶಿ ಆಗ್ರಹಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತಿ  ಕೋ.ಚೆನ್ನಬಸಪ್ಪ  ಅವರು  ಬರೆದ  ‘ಅಪ್ರ­ತಿಮ  ದೇಶಭಕ್ತ  ಟಿಪ್ಪು ಸುಲ್ತಾನ್’  ಕೃತಿಯ  ಬಗ್ಗೆ  ಸಂಶೋ­ಧಕ  ಚಿದಾನಂದ  ಮೂರ್ತಿಯವರು  ಮುಸ್ಲಿಮರ  ಭಾವನೆಗಳಿಗೆ ಧಕ್ಕೆ­ಯಾಗುವ  ರೀತಿ  ಮಾತನಾಡಿದ್ದಾರೆ. ಇತಿಹಾಸವನ್ನು  ಸರಿಯಾಗಿ  ಅಧ್ಯ­ಯನ ಮಾಡದೇ  ಟಿಪ್ಪು  ಸುಲ್ತಾನ್  ಬಗ್ಗೆ  ಇಲ್ಲ  ಸಲ್ಲದ  ಟೀಕೆ  ಮಾಡಿ­ದ್ದಾರೆ’  ಎಂದು  ಹೇಳಿದರು.ಡಿಎಸ್‍ಎಸ್  (ಅಂಬೇಡ್ಕರವಾದ) ರಾಜ್ಯ  ಸಂಚಾಲಕ  ಮಾವಳ್ಳಿ  ಶಂಕರ್  ಮಾತನಾಡಿ, ‘ಟಿಪ್ಪು  ದೇಶ  ದ್ರೋಹಿ  ಎಂಬ  ದಾಖಲೆಗಳು  ಚಿ.ಮೂ  ಅವರಲ್ಲಿದ್ದರೆ    ಬಹಿರಂಗ  ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry