ಮಂಗಳವಾರ, ಏಪ್ರಿಲ್ 13, 2021
30 °C

ಡಿಂಪಲ್ ಸುಂದರಿಯ ಸಿಂಪಲ್ ಮಾತು

ಸಂದರ್ಶನ: ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ನಿಮ್ಮ ಫ್ಯಾಷನ್ ಮಂತ್ರ ಏನು?

ನನಗೆ ವಿಭಿನ್ನವಾದ ಬಟ್ಟೆ ಧರಿಸುವುದು ಇಷ್ಟ. ಮಾಡೆಲ್‌ಗಳಿಗೆ, ನಟಿಯರಿಗೆ ಮಾತ್ರ ಈ ಅವಕಾಶ ಸಿಗುತ್ತದೆ.ಎಲ್ಲಿ ಜಾಸ್ತಿ ಶಾಪಿಂಗ್ ಮಾಡುತ್ತೀರಿ?

ಕಮರ್ಷಿಯಲ್ ಸ್ಟ್ರೀಟ್.ಮಾಡೆಲಿಂಗ್ ಆಯ್ಕೆ ಮಾಡಿಕೊಂಡ ಉದ್ದೇಶ ಹಣ ಮಾಡುವುದೇ? ಹೆಸರೇ?

ಎರಡೂ ಅಲ್ಲ. ನಾನು ತುಂಬಾ ಸ್ಟೈಲಿಶ್ ಆಗಿರುತ್ತೇನೆ. ಹಾಗಾಗಿ ಸ್ನೇಹಿತರು, ಸಂಬಂಧಿಕರು ನೀನು ಯಾಕೆ ರೂಪದರ್ಶಿಯಾಗಬಾರದು ಎಂದು ಕೇಳಿದರು. ನನಗೂ ಸರಿ ಅನಿಸಿತು.ಮನೆಯಲ್ಲಿ ಪ್ರತಿಕ್ರಿಯೆ ಹೇಗಿತ್ತು?

ಅಮ್ಮ ಓಕೆ ಎಂದು ಹೇಳಿದರು. ಆದರೆ ಅಪ್ಪ ಮಾತ್ರ ಸುತರಾಂ ಒಪ್ಪಲಿಲ್ಲ. ನಾಳೆ ಮದುವೆಗೆ ತೊಂದರೆ ಆಗುತ್ತದೆ ಎಂದು ಆತಂಕಪಟ್ಟರು. ನಾನು ಸಾಕಷ್ಟು ಇದರ ಬಗ್ಗೆ ವಿವರಿಸಿ ಹೇಳಿದೆ. ಆಮೇಲೆ ಒಪ್ಪಿದರು.ನಿಮ್ಮ ಸ್ಟೈಲ್‌ಗೆ ಸಿಕ್ಕಿದ ಪ್ರತಿಕ್ರಿಯೆ?

ನಾನು ಸ್ವಲ್ಪ ನಸುಗಪ್ಪು. ಆದರೆ ಕೆನ್ನೆ ಮೇಲಿರುವ ಡಿಂಪಲ್ ಚೆನ್ನಾಗಿದೆ ಎಂದು ಎಲ್ಲರೂ ಹೇಳುತ್ತಾರೆ.ನಿಮ್ಮೂರು ಯಾವುದು? ಈ ಕ್ಷೇತ್ರಕ್ಕೆ ಬಂದು ಎಷ್ಟು ವರ್ಷವಾಯಿತು?

ಮಂಡ್ಯ. ಎರಡು ವರ್ಷ ಹತ್ತಿರ.ನಿಮಗೆ ಇಷ್ಟವಾಗದಿರುವ ಅಂಶ?

ತುಂಬಾ ಸೆಕ್ಸಿಯಾಗಿ ಪೋಸ್ ಕೊಡುವುದು ಇಷ್ಟವಿಲ್ಲ.ಏನಿಷ್ಟ?

ಫೋಟೊ ತೆಗೆಸಿಕೊಳ್ಳುವುದು ನನಗಿಷ್ಟ.ಫೋಟೊಗ್ರಾಫರ್ ತೆಗೆದ ಅಷ್ಟು ಫೋಟೊಗಳಲ್ಲಿ ನಿಮಗೆ ಯಾವುದು ಇಷ್ಟ ಮತ್ತು ಯಾಕೆ?

ಮುಖವನ್ನಷ್ಟೇ ಫೋಕಸ್ ಮಾಡಿದ ಒಂದು ಫೋಟೊ ಇದೆ. ಅದು ನನಗಿಷ್ಟ. ಯಾಕೋ ಅದು ನನ್ನ ಮನಸ್ಸಿಗೆ ತುಂಬಾ ಖುಷಿ ಕೊಡುತ್ತದೆ. ಎಲ್ಲರೂ ಚೆನ್ನಾಗಿ ಕಾಣಿಸ್ತೀಯಾ ಎಂದು ಹೇಳುತ್ತಾರೆ.ಫೋಟೊಗ್ರಾಫರ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅವರು ನಿಜಕ್ಕೂ ಗ್ರೇಟ್. ಸಾವಿರ ಮಾಡೆಲ್‌ಗಳನ್ನು ನೋಡಿರುತ್ತಾರೆ. ನಮ್ಮಿಂದ ಯಾವ ರೀತಿಯ ಭಂಗಿಗಳನ್ನು ತೆಗೆದುಕೊಳ್ಳಬೇಕು ಎಂಬುದು ವೃತ್ತಿ ಸಹಜವಾಗಿ ಅವರಿಗೆ ಗೊತ್ತಿರುತ್ತದೆ. ಅವರಿಂದ ಕಲಿಯುವುದು ತುಂಬಾ ಇದೆ.ಮಾಡೆಲಿಂಗ್ ತಯಾರಿಗೆ ಯಾವ ನಿಯತಕಾಲಿಕೆ ಓದುತ್ತೀರಿ?

`ಫೆಮಿನಾ~. ಜತೆಗೆ ಫ್ಯಾಷನ್‌ಗೆ ಸಂಬಂಧಪಟ್ಟ ವೆಬ್‌ಸೈಟ್‌ಗಳನ್ನು ಗಮನಿಸುತ್ತಿರುತ್ತೇನೆ.ಫ್ಯಾಷನ್ ಲೋಕಕ್ಕೆ ಬರಲು ಕಾರಣ ಯಾರು?

ಇದು ನನ್ನ ಇಷ್ಟದ ಕ್ಷೇತ್ರ. ಕಾಲೇಜಿನಲ್ಲಿ ಇರುವಾಗಲೇ ಸಾಕಷ್ಟು ಫ್ಯಾಷನ್ ಶೋ ಮಾಡಿದ್ದೇನೆ. ಮಾಡೆಲ್ ಆಗಬೇಕು ಎಂಬ ಕ್ರೇಜ್ ಇತ್ತು. ಅಲೆಮಾರಿ ಸಿನಿಮಾದ ನಿರ್ದೇಶಕ ಸಂತು ಅವರು ನನಗೆ ರೂಪಾ ಅಯ್ಯರ್ ಅವರನ್ನು ಪರಿಚಯ ಮಾಡಿಕೊಟ್ಟರು. ಅಲ್ಲಿಂದ ಶುರುವಾಯಿತು ನನ್ನ ಪಯಣ.ರ‌್ಯಾಂಪ್ ಶೋಗೆ ನಿಮ್ಮನ್ನು ನೀವು ಹೇಗೆ ತಯಾರು ಮಾಡಿಕೊಳ್ಳುತ್ತಿರಿ?

ಮೊದಲು ಯಾವ ಉತ್ಪನ್ನದ ಬಗ್ಗೆ ಶೋ ಇದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಮನೆಯಲ್ಲೇ ಮೊದಲ ಹಂತದ ರಿಹರ್ಸಲ್ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನಲ್ಲೊಂದಿಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ.ಮೆಚ್ಚಿನ ಉಡುಪು?


ಮಾಡರ್ನ್ ಬಟ್ಟೆ ಇಷ್ಟ. ಎಲ್ಲರೂ ಸೀರೆಯಲ್ಲಿ ಚೆನ್ನಾಗಿ ಕಾಣಿಸುತ್ತೇನೆ ಅಂತಾರೆ.ಮಾಡೆಲಿಂಗ್ ಹೊರತು ಏನಿಷ್ಟ?

ಓದಿರೋದು ಫ್ಯಾಷನ್ ಡಿಸೈನಿಂಗ್. ಅಪ್ಪನದ್ದು ಸ್ವಂತ ಬಿಜಿನೆಸ್ ಇದೆ. ಸಮಯ ಸಿಕ್ಕಾಗಲೆಲ್ಲ ಅವರಿಗೆ ಸಹಾಯ ಮಾಡುತ್ತೇನೆ. ನನಗೆ ಒಂದು ಹೊಟೇಲ್ ತೆರೆಯಬೇಕು ಎಂಬ ಆಸೆ ಇದೆ. ಸಮಯ ಸಿಕ್ಕಾಗಲೆಲ್ಲ ಫ್ರೆಂಡ್ಸ್ ಜತೆ ತಿರುಗಾಡುತ್ತೇನೆ.ಹೊಸಬರಿಗೆ ಸಲಹೆ?

ಚೆನ್ನಾಗಿ ವರ್ಕ್ ಔಟ್ ಮಾಡಿ. ತರಾತುರಿಯಲ್ಲಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಡಿ. ನಿಧಾನವಾಗಿ ಯೋಚಿಸಿ. ಉತ್ತಮ ತರಬೇತಿ ಪಡೆದುಕೊಂಡರೆ ಭವಿಷ್ಯ ಉತ್ತಮವಾಗುತ್ತದೆ.ಇಷ್ಟದ ನಟಿ?

ಕಲ್ಪನಾ ಇಷ್ಟ. ಅವರ ರೀತಿ ನಟನೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಹಾಗೇ ಮಾಲಾಶ್ರೀ ಕೂಡ ಇಷ್ಟವಾಗುತ್ತಾರೆ.ಸಿನಿಮಾದಲ್ಲಿ ಅವಕಾಶ ಸಿಕ್ಕಿದೆಯಾ?

ಸಿಕ್ಕಿದೆ. ಆದರೆ ಒಳ್ಳೆಯ ಬ್ಯಾನರ್‌ಗಾಗಿ ಕಾಯುತ್ತಿದ್ದೇನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.