ಡಿಆರ್‌ಎಸ್‌: ತಂಡಗಳಿಗೆ ಹೆಚ್ಚುವರಿ ಅವಕಾಶ

7

ಡಿಆರ್‌ಎಸ್‌: ತಂಡಗಳಿಗೆ ಹೆಚ್ಚುವರಿ ಅವಕಾಶ

Published:
Updated:

ದುಬೈ (ಪಿಟಿಐ): ಅಂಪೈರ್‌ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್‌) ನಿಯಮ ಬಳಸುವ ಟೆಸ್ಟ್‌ ಪಂದ್ಯಗಳಲ್ಲಿ ತಂಡಗಳಿಗೆ ಹೆಚ್ಚುವರಿಯಾಗಿ ಎರಡು ಬಾರಿ ತೀರ್ಪು ಮರುಪರಿಶೀಲನೆಗೆ ಅವಕಾಶ ನೀಡಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿರ್ಧರಿಸಿದೆ.ಈಗ ಇರುವ ನಿಯಮದಂತೆ ತಂಡಕ್ಕೆ ಒಂದು ಇನಿಂಗ್ಸ್‌ನಲ್ಲಿ ಎರಡು ಸಲ ಮಾತ್ರ ಅಂಪೈರ್‌ ತೀರ್ಪಿನ ಮರುಪರಿಶೀಲನೆಗೆ ಅವಕಾಶವಿದೆ. ಇವೆರಡೂ ಯಶಸ್ವಿಯಾಗದಿದ್ದರೆ, ಮತ್ತೆ ಅವಕಾಶ ದೊರೆಯುವುದಿಲ್ಲ. ಆದರೆ ಇನ್ನು ಮುಂದೆ ಪ್ರತಿ ಇನಿಂಗ್ಸ್‌ನ 80 ಓವರ್‌ಗಳ ಬಳಿಕ ಹೆಚ್ಚುವರಿಯಾಗಿ ಮತ್ತೆರಡು ಅವಕಾಶಗಳು ಲಭಿಸಲಿವೆ.ಹೊಸ ನಿಯಮ ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ ಎಂದು ಐಸಿಸಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry