ಶುಕ್ರವಾರ, ಮೇ 20, 2022
27 °C

ಡಿ.ಇಡಿ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಸಮೀಪದ ನರಸಾಪುರದ ಶರಣ ಚಂದ್ರಶೇಖರ ಡಿ.ಇಡಿ ಕಾಲೇಜು ಅವ್ಯವಸ್ಥೆಯ ಆಗರವಾಗಿದೆ ಎಂದು ಆರೋಪಿಸಿ ಕಾಲೇಜಿನ ವಿದ್ಯಾರ್ಥಿಗಳು ಈಚೆಗೆ ಕಾಲೇಜಿನ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು.ತಮ್ಮ ಮೂಲ ದಾಖಲೆಗಳು ಹಾಗೂ ಶಿಷ್ಯವೇತನ ನೀಡುವ ವೇಳೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಕಾಲೇಜಿನ ಪ್ರಾಚಾರ್ಯರು ಕಳೆದ 4 ತಿಂಗಳಿಂದ ನಾಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಕೆಲ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಸಹ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.ಕಾಲೇಜಿನ ಅವ್ಯವಸ್ಥೆಯ ಕುರಿತು ಆಡಳಿತ ಮಂಡಳಿ ಹಾಗೂ ಡಯಟ್‌ನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿ ಸಿದರೂ ಪ್ರಯೋಜನವಾಗಿಲ್ಲ. ಕಾಲೇಜಿ ನಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಪರೀಕ್ಷೆಗಳ ಅರ್ಜಿ ಗಳನ್ನು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಭರ್ತಿ ಮಾಡಿ ಮರಳಿ ನೀಡಿದ್ದು ಅಧಿಕಾರಿಗಳು ಅರ್ಜಿಗಳನ್ನು ಕಾಲೇಜಿನಿಂದ ಇನ್ನೂವರೆಗೂ ವಿಶ್ವವಿದ್ಯಾಲಯಕ್ಕೆ ಕಳುಹಿಸಲಿಲ್ಲ. ಇದರಿಂದ ಭವಿಷ್ಯದಲ್ಲಿ ತೊಂದರೆ ಯಾಗುವ ಸಮಸ್ಯೆ ಕಾಡುತ್ತಿದೆ ಎಂದು ವಿದ್ಯಾರ್ಥಿಗಳು ನೋವನ್ನು ವ್ಯಕ್ತಪಡಿಸಿದರು.ಧರಣಿಯಲ್ಲಿ ವಿದ್ಯಾರ್ಥಿಗಳಾದ ಬಾಬಾಜಾನ್ ಅತ್ತಿಗೇರಿ, ನಾಗಲಿಂಗಯ್ಯ ಬೂದಿಹಾಳ ಹಿರೇಮಠ, ಪ್ರಶಾಂತ ಮಠದ, ಮಹಾದೇವ ಪಾಟೀಲ, ಮಂಜುನಾಥ ಸುಣಗಾರ, ಮೈಲಾರಪ್ಪ ಶೇಶಪ್ಪ ನವರ, ಶಿವಕುಮಾರ ಕುಮಸಿ, ನಿರ್ಮಲಾ ಅಣ್ಣಿಗೇರಿ, ತೈಸೀನ ಪತ್ತೇನವರ, ರಿಜ್‌ವಾನ್ ಡಾಲಾಯತ್, ಅನ್ನಪೂರ್ಣಾ ತಿಮ್ಮಾಪೂರ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.