ಗುರುವಾರ , ಏಪ್ರಿಲ್ 15, 2021
31 °C

ಡಿಎಂಕೆ, ಪಿಎಂಕೆ ವಿರುದ್ಧ ದೂರು: ಚುನಾವಣಾ ಭರವಸೆಗಳು ಲಂಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್‌ಎಸ್): ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರ  ಪಕ್ಷ ಪಿಎಂಕೆಯು ಚುನಾವಣೆ ಹಿನ್ನೆಲೆಯಲ್ಲಿ ಕಡು ಬಡ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಉಚಿತವಾಗಿ ನೀಡುವುದಾಗಿ ಮಾಡಿರುವ ಘೋಷಣೆ ಲಂಚವೇ ಹೊರತು ಮತ್ತೇನಲ್ಲ ಎಂದು ಚೆನ್ನೈ ಮೂಲದ ವಕೀಲ ಎಸ್.ಸುಬ್ರಮಣಿಯನ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಡಿಎಂಕೆಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ; ಪ್ರತಿ ಬಡ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಮೌಲ್ಯದ ಕಾಂಕ್ರಿಟ್ ಮನೆ ನಿರ್ಮಾಣ, ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ 5,000ದಿಂದ 10,000ವರಗೆ ನಗದು ಹಣ, ಉಚಿತ ಮಿಕ್ಸರ್ ಗ್ರೈಂಡರ್, ವಿದ್ಯಾರ್ಥಿಗಳಿಗೆ 20,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಲ್ಯಾಪ್‌ಟಾಪ್, ಹಿರಿಯ ನಾಗರಿಕರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ಪ್ರತಿ ತಿಂಗಳು ಪ್ರತಿ ಮನೆಗೆ 175 ರೂ ಮೌಲ್ಯದ 35 ಕೆ.ಜಿ ಅಕ್ಕಿ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿತ್ತು. ಮೈತ್ರಿ ಪಕ್ಷ ಕೂಡಾ ಸುಮಾರು 1,500 ರೂಪಾಯಿಯನ್ನು ನೇರವಾಗಿ ವರ್ಗಾವಣೆ ಮಾಡುವ ಘೋಷಣೆ ಮಾಡಿತ್ತು.

ರಾಜ್ಯ ಬೊಕ್ಕಸದಲ್ಲಿರುವ ತೆರಿಗೆದಾರರಿಂದ ಸಂಗ್ರಹಿಸಲಾದ ಹಣವನ್ನು ಪುಕ್ಕಟೆಯಾಗಿ ಹಂಚುವ ಅಧಿಕಾರ ಯಾವ ಸರ್ಕಾರಕ್ಕೂ ಇಲ್ಲ ಎಂದು ಬಾಲಾಜಿ ಹೇಳಿದ್ದಾರೆ.  ಬಾಲಾಜಿ ಅವರು ತಮ್ಮ ದೂರನ್ನು ಮಂಗಳವಾರ ಇ-ಮೇಲ್ ಮೂಲಕ ಚುನಾವಣಾ ಸಮಿತಿಗೆ ರವಾನಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.