ಭಾನುವಾರ, ಮೇ 9, 2021
27 °C

ಡಿಎಂಕೆ ಬಹಿಷ್ಕಾರ- ಕರುಣಾನಿಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಪುನರ್ವಸತಿ ಹಾಗೂ ರಾಜಕೀಯ ಪ್ರಕ್ರಿಯೆ ಪರಿಶೀಲನೆಗೆಂದು ಈ ವಾರ ಶ್ರೀಲಂಕಾಗೆ ಭೇಟಿ ನೀಡಲಿರುವ ಸರ್ವಪಕ್ಷ ನಿಯೋಗದಲ್ಲಿ ಡಿಎಂಕೆ ಭಾಗವಹಿಸುವುದಿಲ್ಲ ಎಂದಿರುವ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ, `ಇಂಥ ಭೇಟಿಗಳಿಂದ ಪ್ರಯೋಜನವಿಲ್ಲ ಎನ್ನುವುದು ಈ ಹಿಂದಿನ ಅನುಭವಗಳಿಂದ ತಿಳಿದಿದೆ~ ಎಂದಿದ್ದಾರೆ.ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ನೇತೃತ್ವದ ಈ ನಿಯೋಗದಲ್ಲಿ ಸಂಸದ ಟಿ.ಕೆ.ಎಸ್.ಇಳಂಗೋವನ್ ಅವರು ಡಿಎಂಕೆಯ ಏಕೈಕ ಪ್ರತಿನಿಧಿಯಾಗಿದ್ದರು.ಈ ಮೊದಲು 2010ರಲ್ಲಿ ತಮಿಳುನಾಡಿನ ಡಿಎಂಕೆ ಹಾಗೂ ಕಾಂಗ್ರೆಸ್ ಸಂಸದರ ನಿಯೋಗವು ಲಂಕಾಗೆ ಭೇಟಿ ನೀಡಿತ್ತು. ಆಗ ಕರುಣಾನಿಧಿ ಅವರ ಪುತ್ರಿ ಕನಿಮೊಳಿ, ಟಿ.ಆರ್.ಬಾಲು ಹಾಗೂ ವಿಡುತಲೈ ಚಿತುತೈಗಳ್ ಕಚ್ಚಿ ಸಂಸ್ಥಾಪಕ ಥೋಲ್ ತಿರುಮವಳವನ್ ಕೂಡ ನಿಯೋಗದಲ್ಲಿ ಇದ್ದರು.ಆದರೆ ಈ ಬಾರಿ ಇದೇ 16ರಿಂದ 22ರವರೆಗೆ ಲಂಕಾಗೆ ತೆರಳುವ ನಿಯೋಗದಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಭಾಗಿಯಾಗುತ್ತಿಲ್ಲ.ಲಂಕಾ ಭೇಟಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಎಐಎಡಿಎಂಕೆ ನಾಯಕಿ, ಮುಖ್ಯಮಂತ್ರಿ ಜಯಲಲಿತಾ, ಈ ನಿಯೋಗದಲ್ಲಿ ಇದ್ದ ಪಕ್ಷದ ಏಕೈಕ ಪ್ರತಿನಿಧಿ ಎ.ವಿಲಿಯಂ ರಾಬಿ ಬರ್ನಾರ್ಡ್ ಅವರನ್ನು ವಾಪಸ್ ಕರೆಸಿಕೊಂಡಿದ್ದರು.ವ್ಯರ್ಥ ಭೇಟಿ: ಸರ್ವಪಕ್ಷ ನಿಯೋಗದ ಲಂಕಾ ಭೇಟಿಯನ್ನು `ವ್ಯರ್ಥ ಕಸರತ್ತು~ ಎಂದು ಎಂಡಿಎಂಕೆ ಭಾನುವಾರ ಟೀಕಿಸಿದೆ.`ಉದ್ದೇಶಿತ ಭೇಟಿಯಿಂದ ಲಂಕಾ ತಮಿಳರಿಗೆ ಏನೂ ಉಪಯೋಗವಿಲ್ಲ~ ಎಂದು ಪಕ್ಷದ ಮುಖ್ಯಸ್ಥ ವೈಕೊ ಸುದ್ದಿಗಾರರಿಗೆ ತಿಳಿಸಿದರು.ಮುಖ್ಯಮಂತ್ರಿ ಜಯಲಲಿತಾ ಅವರು ಈ ನಿಯೋಗದಿಂದ ತಮ್ಮ ಪಕ್ಷದ ಏಕೈಕ ಪ್ರತಿನಿಧಿಯನ್ನು ವಾಪಸ್ ಕರೆಸಿಕೊಂಡಿದ್ದಕ್ಕೆ ವೈಕೊ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.