ಬುಧವಾರ, ಜೂನ್ 23, 2021
23 °C

ಡಿಎಂಡಿಕೆ ಅಭ್ಯರ್ಥಿ ಕಣದಿಂದ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಲೊಕಸಭೆ ಚುನಾವಣೆಗೆ ನಮಕ್ಕಲ್‌ ಕ್ಷೇತ್ರದ ಡಿಎಂಡಿಕೆ ಅಭ್ಯರ್ಥಿಯಾಗಿದ್ದ ಎನ್‌.ಮಹೇಶ್ವರನ್‌ ಅವರು ಅನಾರೋಗ್ಯದ ಕಾರಣ ನೀಡಿ ಸ್ಪರ್ಧೆ­ಯಿಂದ ಹಿಂದೆ ಸರಿದಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ಜತೆ ಡಿಎಂಡಿಕೆ ಮೈತ್ರಿ ಮಾಡಿಕೊಂಡಿದ್ದರೂ, ಪಕ್ಷದ ಮುಖ್ಯಸ್ಥ ವಿಜಯಕಾಂತ್‌ ಅವರು ಕಳೆದ ವಾರ ಏಕಪಕ್ಷೀಯ­ವಾಗಿ ಐವರು ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದ್ದರು. ಇವರಲ್ಲಿ ಮಹೇಶ್ವರನ್‌ ಅವರೂ ಒಬ್ಬರು.

ವಿಜಯಕಾಂತ್‌ ಅವರು ಪ್ರಚಾರ ಆರಂಭಿಸುವ ಕೆಲ ಗಂಟೆ­­ಗಳ ಮುಂಚೆ­ಯಷ್ಟೇ ಮಹೇಶ್ವರನ್‌ ತಮ್ಮ ನಿರ್ಧಾರ­ವನ್ನು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.