ಡಿಎಚ್‌ಎಫ್‌ಎಲ್: ಮನೆ ಬಾಗಿಲಿಗೆ ಗೃಹಸಾಲ ಮಾಹಿತಿ

7

ಡಿಎಚ್‌ಎಫ್‌ಎಲ್: ಮನೆ ಬಾಗಿಲಿಗೆ ಗೃಹಸಾಲ ಮಾಹಿತಿ

Published:
Updated:

ಬೆಂಗಳೂರು:  ಗೃಹಸಾಲ ಕಂಪನಿದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್  `ಡಿಎಚ್‌ಎಫ್‌ಎಲ್-ಎಕ್ಸ್‌ಪ್ರೆಸ್~ ಹೆಸರಿನ ಸಂಚಾರಿ  ಗೃಹ ಸಾಲ ಮಾಹಿತಿ  ಸೌಲಭ್ಯಕ್ಕೆ ಚಾಲನೆ ನೀಡಿದೆ.

ಗ್ರಾಹಕರ ಮನೆ ಬಾಗಿಲಿಗೆ ಗೃಹಸಾಲದ ಮಾಹಿತಿ ನೀಡುವ ವಿಶಿಷ್ಟ ವ್ಯವಸ್ಥೆ ಇದಾಗಿದೆ. ಈ ಸೌಲಭ್ಯಕ್ಕೆ ಸಂಸ್ಥೆಯ ಮಾರಾಟ  ವಹಿವಾಟು ಮುಖ್ಯಸ್ಥ ಮುದಿತ್ ಭಟ್ನಾಗರ್ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದರು.

ಇದೊಂದು ರಾಷ್ಟ್ರೀಯ ಪ್ರಚಾರ ಆಂದೋಲನವಾಗಿದ್ದು  ಮಧ್ಯಮ ಆದಾಯದ ವರ್ಗದವರನ್ನು (ಎಲ್‌ಎಂಎಐ) ದೃಷ್ಟಿಯಲ್ಲಿ ಇಟ್ಟುಕೊಂಡು ನಡೆಸಲಾಗುತ್ತಿದೆ. ಗೃಹ ಸಾಲ ಖರೀದಿಸುವವರ ಮನೆ ಬಾಗಿಲಿಗೆ ಹೋಗಿ  ಗೃಹಸಾಲ ಪಡೆಯುವ ವಿಧಾನ ತಿಳಿಸಲು ಈ ಸೌಲಭ್ಯ ನೆರವಾಗಲಿದೆ. ನಮ್ಮ ಗ್ರಾಹಕರು ಯಾವುದೇ ತೊಂದರೆ ಇಲ್ಲದೇ ಗೃಹಸಾಲ ಪಡೆಯುವ ವಿಧಾನ ಕುರಿತು ಅರ್ಥ ಮಾಡಿಸುವುದು ಇದರ ಉದ್ದೆೀಶವಾಗಿದೆ  ಎಂದು ಭಟ್ನಾಗರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry