ಡಿ.ಎ.ಶಂಕರ್‌ಗೆ ಕಾಂತಾವರ ಪುರಸ್ಕಾರ

7

ಡಿ.ಎ.ಶಂಕರ್‌ಗೆ ಕಾಂತಾವರ ಪುರಸ್ಕಾರ

Published:
Updated:

ಮೂಡುಬಿದಿರೆ: ಮೊಗಸಾಲೆ ಪ್ರತಿಷ್ಠಾನ ಕಾಂತಾವರ ಕನ್ನಡ ಸಂಘದಲ್ಲಿ ಸ್ಥಾಪಿಸಿರುವ 12ನೇ ವರ್ಷದ `ಕಾಂತಾವರ ಸಾಹಿತ್ಯ ಪುರಸ್ಕಾರ~ಕ್ಕೆ ಪ್ರಸಿದ್ಧ ಲೇಖಕ ಪ್ರೊ.ಡಿ.ಎ ಶಂಕರ್ ಮೈಸೂರು ಮತ್ತು `ಕಾಂತಾವರ ಲಲಿತಕಲಾ ಪುರಸ್ಕಾರ~ಕ್ಕೆ ಕಲ್ಲೂರು ನಾಗೇಶ ಅವರನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ತಲಾ ರೂ  5 ಸಾವಿರ ಮೊತ್ತದ ಗೌರವ ಸಂಭಾವನೆ, ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನ.1ರಂದು ಕಾಂತಾವರ ಕನ್ನಡ ಸಂಘದಲ್ಲಿ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.  ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡುವರು ಎಂದು  ಸಂಘದ ಪ್ರಧಾನ ಕಾರ್ಯದರ್ಶಿ ಬೇಲಾಡಿ ರಾಮಚಂದ್ರ ಆಚಾರ್, ಪ್ರತಿಷ್ಠಾನದ ನಿರ್ದೇಶಕ ನಿರಂಜನ ಮೊಗಸಾಲೆ  ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry