ಡಿ.ಎ.ಸಿ. ವಾರಾಂತ್ಯ ಅಥ್ಲೆಟಿಕ್ ಕೂಟ: ಟೂಮಿ ವೈಷ್ಣವಿ ಡಬಲ್ ಸಾಧನೆ

4

ಡಿ.ಎ.ಸಿ. ವಾರಾಂತ್ಯ ಅಥ್ಲೆಟಿಕ್ ಕೂಟ: ಟೂಮಿ ವೈಷ್ಣವಿ ಡಬಲ್ ಸಾಧನೆ

Published:
Updated:
ಡಿ.ಎ.ಸಿ. ವಾರಾಂತ್ಯ ಅಥ್ಲೆಟಿಕ್ ಕೂಟ: ಟೂಮಿ ವೈಷ್ಣವಿ ಡಬಲ್ ಸಾಧನೆ

ಬೆಂಗಳೂರು: ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ ತಂಡದ ಟೂಮಿ ವೈಷ್ಣವಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ 23ನೇ ವಾರ್ಷಿಕ `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ~ ಪ್ರಾಯೋಜಿತ ವಾರಾಂತ್ಯ 3ನೇ ಅಥ್ಲೆಟಿಕ್ ಕೂಟದ ಹನ್ನೆರಡು ವರ್ಷ ವಯಸ್ಸಿನೊಳಗಿನವರ ಬಾಲಕಿಯರ ವಿಭಾಗದಲ್ಲಿ `ಡಬಲ್~ ಪಡೆದ ಗೌರವಕ್ಕೆ ಪಾತ್ರರಾದರು.



ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಾರಾಂತ್ಯ ಅಥ್ಲೆಟಿಕ್ ಕೂಟದಲ್ಲಿ ಟೂಮಿ ವೈಷ್ಣವಿ 100 ಮೀ. ಓಟ ಹಾಗೂ 60 ಮೀ. ಹರ್ಡಲ್ಸ್‌ನಲ್ಲಿ ಮೊದಲ ಸ್ಥಾನ ಪಡೆದರು.



ಬಾಲಕಿಯರ ವಿಭಾಗದ ಫಲಿತಾಂಶಗಳು ಇಂತಿವೆ. 12 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ)-1, ಶಿಫಾಲಿ ಟಂಡನ್ (ವಿದ್ಯಾನಿಕೇತನ ಸಾಲೆ)-2, ನಿಹಾರಿಕಾ (ಬೆಥನಿ ಪ್ರೌಢ ಶಾಲೆ)-3, ಕಾಲ: 13.8 ಸೆ.; 800 ಮೀ. ಓಟ: ಬಿ.ಎ. ಪ್ರಗತಿ (ಎಸ್. ಕದಂಬಿ ವಿದ್ಯಾಕೇಂದ್ರ)-1, ಪೂರ್ಣಶ್ರೀ-2, ಕೃತಿಕಾ ಸೋಲಂಕಿ-3 (ಇಬ್ಬರೂ ಹೋಲಿ ಏಂಜೆಲ್ಸ್ ಪ್ರೌಢ ಶಾಲೆ), ಕಾಲ: 3:34.1.;

 

1500 ಮೀ. ಓಟ: ನಿಖತ್ ಸುಲ್ತಾನಾ-1, ಅನುಪ್ರಿಯಾ-2, ಎಂ.ಎಸ್. ಮೊನಿಕಾ-3 (ಮೂವರೂ ಹೋಲಿ ಏಂಜೆಲ್ಸ್ ಶಾಲೆ), ಕಾಲ: 7:37.2.; 60 ಮೀ. ಹರ್ಡಲ್ಸ್: ಟೂಮಿ ವೈಷ್ಣವಿ-1, ಎನ್.ಬಿ. ಪೂಜಾಲಕ್ಷ್ಮಿ-2, ಎಂ.ಪಿ. ಚೈತ್ರ-3 (ಇಬ್ಬರು ಶೇಷಾದ್ರಿಪುರ ಇಂಗ್ಲೀಷ್ ಶಾಲೆ), ಕಾಲ: 11.9 ಸೆ.; ಲಾಂಗ್‌ಜಂಪ್: ಶಿಫಾಲಿ ಟಂಡನ್-1, ನಿಹಾರಿಕಾ-2, ಜಿ.ಎಸ್. ಮಹಿಮಾ (ಸೇಂಟ್ ಚಾರ್ಲ್ಸ್ ಪ್ರೌಢ ಶಾಲೆ)-3,



ದೂರ: 3.86 ಮೀ.; ಟ್ರಿಪಲ್‌ಜಂಪ್: ಅನನ್ಯ ಮೆನನ್ (ಸೇಕ್ರೆಡ್ ಹಾರ್ಟ್ ಶಾಲೆ)-1, ಆರ್. ಸಾಕ್ಷಿ (ಹೋಲಿ ಏಂಜೆಲ್ಸ್ ಶಾಲೆ)-2, ಜಿ.ಎಸ್. ಮಹಿಮಾ-3, ದೂರ: 7.88 ಮೀ.; ಹೈಜಂಪ್: ಬಿ. ಸಂಕೃತಿ ಬಿ. ಗುರಪ್ಪ (ವಿದ್ಯಾನಿಕೇತನ ಶಾಲೆ)-1, ಮುದ್ರಾ ಧನಂಜಯ (ಎಸ್. ಕದಂಬಿ ವಿದ್ಯಾಕೇಂದ್ರ)-2, ಸೈಯಿದಾ ಜವೇರಿಯಾ (ಹೋಲಿ ಏಂಜೆಲ್ಸ್ ಶಾಲೆ)-3, ಎತ್ತರ: 1.10 ಮೀ.; ಷಾಟ್‌ಪಟ್: ಎಸ್. ಗ್ರೇಸ್ ಎಲಿಜಬೆತ್ (ಸೇಂಟ್ ಮೇರಿ ಪಬ್ಲಿಕ್ ಶಾಲೆ)-1, ಅಲಿಶಾ ವಿಕ್ರಮ್-2, ಚಾರು ರಹೇಜಾ-3 (ಇಬ್ಬರು ವಿದ್ಯಾನಿಕೇತನ ಶಾಲೆ), ದೂರ: 7.10 ಮೀ.



15 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಕೆ. ಸಿಮ್ರಾಲ್ ದಿನ್ಹಾ (ದಿ ಬೆಸ್ಟ್ ಪ್ರೌಢ ಶಾಲೆ)-1, ಎಂ. ಕಾವ್ಯಾ (ಸೇಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಶಾಲೆ)-2, ಎಲಾ ಮಾನ್ಯ ನವೀನ್ (ಸೇಕ್ರೆಡ್ ಹಾರ್ಟ್ ಬಾಲಕಿಯರ ಶಾಲೆ)-3, ಕಾಲ: 13.3 ಸೆ.; 800 ಮೀ. ಓಟ: ಆರ್. ಕೃಪಾ (ಸೇಂಟ್ ಆ್ಯನ್ಸ್ ಪ್ರೌಢ ಶಾಲೆ)-1, ಟಿ. ನಿಶಾ (ಕಾರ್ಮೆಲ್ ಕಾನ್ವೆಂಟ್ ಶಾಲೆ)-2, ವಿ.ಪಿ. ತನುಶಾ (ವಿದ್ಯಾನಿಕೇತನ ಶಾಲೆ)-3, ಕಾಲ: 2:46.6.; 1500 ಮೀ. ಓಟ: ಟಿ. ನಿಶಾ-1, ಸಿ. ಸ್ವಾತಿ (ಬೆಥನಿ ಪ್ರೌಢ ಶಾಲೆ)-2, ವಿ.ಪಿ. ತನುಶಾ-3, ಕಾಲ: 5:54.3.;



100 ಮೀ. ಹರ್ಡಲ್ಸ್: ಟಿ. ನಿವೇತಾ (ಕಾರ್ಮೆಲ್ ಶಾಲೆ)-1, ಅಕ್ವಿಲಿನಾ (ಹೋಲಿ ಏಂಜೆಲ್ಸ್ ಪ್ರೌಢ ಶಾಲೆ)-2, ಡಾಲಿ ಡಯಾನಾ (ಮೇರಿ ಇಮಾಕ್ಯುಲೇಟ್ ಪ್ರೌಢ ಶಾಲೆ)-3, ಕಾಲ: 18.2 ಸೆ.; ಲಾಂಗ್‌ಜಂಪ್: ಕೆ. ಸಿಮ್ರಾಲ್ ದಿನ್ಹಾ-1, ಸಿ.ಜಿ. ಸ್ವಾತಿ (ಮೇರಿ ಇಮಾಕ್ಯುಲೇಟ್ ಪ್ರೌಢ ಶಾಲೆ)-2, ಕಾವ್ಯಾ ಜೇಕಬ್ (ಕ್ಲಾರೆನ್ಸ್ ಪ್ರೌಢ ಶಾಲೆ)-3,

 

ದೂರ: 4.65 ಮೀ.; ಟ್ರಿಪಲ್‌ಜಂಪ್: ಕಾವ್ಯಾ ಜೇಕಬ್-1, ಸಿ.ಜಿ. ಸ್ವಾತಿ-2, ತೇಜಸ್ವಿ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ)-3, ದೂರ: 9.60 ಮೀ.; ಹೈಜಂಪ್: ಜಿ. ಅನ್ನಪೂರ್ಣ (ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಶಾಲೆ)-1, ತೇಜಸ್ವಿ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ)-2, ಅಕ್ವಿಲಿನಾ-3, ಎತ್ತರ: 1.41 ಮೀ.; ಷಾಟ್‌ಪಟ್: ಟಿ. ನಿವಿತಾ (ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆ)-1, ಸಹನಾ ಸುರೇಶ್ (ವಿದ್ಯಾನಿಕೇತನ ಶಾಲೆ)-2, ಊರ್ಮಿಳಾ ಆನಂದ್ (ದಿ ಬ್ರಿಗೇಡ್ ಶಾಲೆ)-3, ದೂರ: 9.93 ಮೀ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry