ಡಿ.ಎ.ಸಿ. ವಾರಾಂತ್ಯ ಅಥ್ಲೆಟಿಕ್ ಕೂಟ: ವೈಷ್ಣವಿ, ಸಿಮ್ರಲ್‌ಗೆ ಡಬಲ್

7

ಡಿ.ಎ.ಸಿ. ವಾರಾಂತ್ಯ ಅಥ್ಲೆಟಿಕ್ ಕೂಟ: ವೈಷ್ಣವಿ, ಸಿಮ್ರಲ್‌ಗೆ ಡಬಲ್

Published:
Updated:
ಡಿ.ಎ.ಸಿ. ವಾರಾಂತ್ಯ ಅಥ್ಲೆಟಿಕ್ ಕೂಟ: ವೈಷ್ಣವಿ, ಸಿಮ್ರಲ್‌ಗೆ ಡಬಲ್

ಬೆಂಗಳೂರು:  ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆಯ ಟೂಮಿ ವೈಷ್ಣವಿ ಹಾಗೂ ಬೆಸ್ಟ್ ಪ್ರೌಢ ಶಾಲೆಯ ಕೆ. ಸಿಮ್ರಲ್ ದಿನ್ಹಾ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ 23ನೇ ವಾರ್ಷಿಕ ಮೊದಲ ವಾರಾಂತ್ಯ  ಅಥ್ಲೆಟಿಕ್ ಕೂಟದ  ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ 12 ಮತ್ತು 15 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ `ಡಬಲ್~ ಪಡೆದ ಗೌರವಕ್ಕೆ ಪಾತ್ರರಾದರು.ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಾರಾಂತ್ಯ ಅಥ್ಲೆಟಿಕ್ ಕೂಟದಲ್ಲಿ  ಬಾಲಕಿಯರ 12 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಟೂಮಿ ವೈಷ್ಣವಿ 100 ಮೀ. ಓಟ ಮತ್ತು 60 ಮೀ.    ಹರ್ಡಲ್ಸ್‌ನಲ್ಲಿ ಹಾಗೂ 15 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಕೆ. ಸಿಮ್ರಲ್ ದಿನ್ಹಾ 100 ಮೀ. ಓಟ ಹಾಗೂ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು. ಬಾಲಕಿಯರ ವಿಭಾಗದ ಫಲಿತಾಂಶಗಳು ಇಂತಿವೆ:

ಹನ್ನೆರಡು ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ)-1, ಶಿಫಾಲಿ ಟಂಡನ್ (ವಿದ್ಯಾನಿಕೇತನ ಶಾಲೆ)-2, ನಿಹಾರಿಕಾ (ಬೆಥನಿ ಪ್ರೌಢ ಶಾಲೆ)-3, ಕಾಲ: 13.8 ಸೆ.; 800 ಮೀ. ಓಟ: ಕೃತಿಕಾ ಸೊನಾಲಿ-1, ಪೂರ್ಣಶ್ರೀ-2, ನಿಖಾತ್ ಸುಲ್ತಾನಾ-3 (ಮೂವರು ಹೋಲಿ ಏಂಜೆಲ್ಸ್ ಪ್ರೌಢ ಶಾಲೆ), ಕಾಲ: 3:41.4.; 1500 ಮೀ. ಓಟ: ನಿಖಾತ್ ಸುಲ್ತಾನಾ-1, ಬೃಂದಾ-2, ಅನುಪ್ರಿಯಾ-3 (ಮೂವರು ಹೋಲಿ ಏಂಜೆಲ್ಸ್ ಶಾಲೆ), ಕಾಲ: 7:33.1.; 60 ಮೀ. ಹರ್ಡಲ್ಸ್: ಟೂಮಿ ವೈಷ್ಣವಿ-1, ಎಂ.ಪಿ. ಚಿತ್ರಾ-2,  ಎನ್.ಬಿ. ಪೂಜಾ ಲಕ್ಷ್ಮೀ -3 (ಇಬ್ಬರು ಶೇಷಾದ್ರಿಪುರಂ ಇಂಗ್ಲೀಷ್ ಪ್ರೌಢ ಶಾಲೆ), ಕಾಲ: 12.5 ಸೆ.; ಲಾಂಗ್‌ಜಂಪ್: ಶಿಫಾಲಿ ಟಂಡನ್-1, ಜಿ.ಎಸ್. ಮಹಿಮಾ (ಸೇಂಟ್ ಚಾರ್ಲ್ಸ್ ಪ್ರೌಢ ಶಾಲೆ)-2, ನಿಹಾರಿಕಾ-3, ದೂರ: 4.00 ಮೀ.; ಟ್ರಿಪಲ್‌ಜಂಪ್: ಅನನ್ಯ ಮೆನನ್ (ಸೇಕ್ರೆಡ್ ಹಾರ್ಟ್ ಬಾಲಕಿಯರ ಪ್ರೌಢ ಶಾಲೆ)-1, ಟಿ. ಮೈನಾ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ)-2, ಅಪರಾಜಿತ ಜಯರಾಮ್ (ವಿದ್ಯಾನಿಕೇತನ ಶಾಲೆ)-3, ದೂರ: 7.20 ಮೀ.; ಹೈಜಂಪ್: ಮುದ್ರಾಲ್ ಧನಂಜಯ್ (ಕದಂಬಿ ವಿದ್ಯಾಕೇಂದ್ರ)-1, ಅಪರಾಜಿತ ಜಯರಾಮ್-2, ಯೂಸ್ರಾ ಜೈನಾಬ್ (ಹೋಲಿ ಏಂಜೆಲ್ಸ್ ಪ್ರೌಢ ಶಾಲೆ)-3, ಎತ್ತರ: 1.04 ಮೀ.; ಷಾಟ್‌ಪಟ್: ಚಾರು ರಹೇಜಾ (ವಿದ್ಯಾನಿಕೇತನ ಶಾಲೆ)-1, ಎಸ್. ಗ್ರೇಸ್ ಎಲಿಜಬೆತ್ (ಸೇಂಟ್ ಮೇರಿಸ್ ಶಾಲೆ)-2, ಅಲಿಸಾ ವಿಕ್ರಮ್ (ವಿದ್ಯಾನಿಕೇತನ ಶಾಲೆ)-3, ದೂರ: 5.76 ಮೀ.ಹದಿನೈದು ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಕೆ. ಸಿಮ್ರಲ್ ದಿನ್ಹಾ (ಬೆಸ್ಟ್ ಪ್ರೌಢ ಶಾಲೆ)-1, ಎಂ. ಕಾವ್ಯಾ (ಸೇಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢ ಶಾಲೆ)-2, ದೇಸ್ನಾ ವಿನಯ್ ಶರಾಫ್ (ವಿದ್ಯಾಶಿಲ್ಪಾ ಅಕಾಡೆಮಿ)-3, ಕಾಲ: 13.1 ಸೆ.; 800 ಮೀ. ಓಟ: ಆರ್. ಕೃಪಾ (ಸೇಂಟ್ ಆ್ಯನ್ಸ್ ಬಾಲಕಿಯರ ಪ್ರೌಢ ಶಾಲೆ)-1, ಎಸ್. ಅಮೃತಾ (ಬ್ರಿಗೇಡ್ ಶಾಲೆ)-2, ತನುಶಾ ವಿ. ಪಂಚಾಲ್ (ವಿದ್ಯಾನಿಕೇತನ ಶಾಲೆ)-3, ಕಾಲ: 2:52.6.; 1500 ಮೀ. ಓಟ: ಟಿ. ನಿಶಾ (ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆ)-1, ಆರ್. ಕೃಪಾ (ಸೇಂಟ್ ಆ್ಯನ್ಸ್ ಬಾಲಕಿಯರ ಪ್ರೌಢ ಶಾಲೆ)-2, ತನುಶಾ ವಿ. ಪಂಚಾಲ್-3, ಕಾಲ: 6:06.6.; 100 ಮೀ. ಹರ್ಡಲ್ಸ್: ಟಿ. ನಿವೇತಾ (ಕಾರ್ಮೆಲ್ ಕಾನ್ವೆಂಟ್)-1, ಅಕ್ವಿಲಿನಾ (ಹೋಲಿ ಏಂಜೆಲ್ಸ್ ಪ್ರೌಢ ಶಾಲೆ)-2, ಡಾಲಿ ಡಯಾನಾ (ಮೇರಿ ಇಮಾಕ್ಯುಲೇಟ್ ಪ್ರೌಢ ಶಾಲೆ)-3, ದೂರ: 17.8 ಸೆ.; ಲಾಂಗ್‌ಜಂಪ್: ಕೆ. ಸಿಮ್ರಲ್ ದಿನ್ಹಾ-1, ಸಿ.ಜಿ. ಸ್ವಾತಿ (ಮೇರಿ ಇಮಾಕ್ಯುಲೇಟ್ ಪ್ರೌಢ ಶಾಲೆ)-2, ಕಾವ್ಯಾ ಜೇಕಬ್ (ಕ್ಲಾರೆನ್ಸ್ ಪ್ರೌಢ ಶಾಲೆ)-3, ದೂರ: 4.86 ಮೀ.; ಟ್ರಿಪಲ್‌ಜಂಪ್: ಕಾವ್ಯಾ ಜೇಕಬ್-1, ಪಿ.ಕೆ. ತೇಜಶ್ವಿ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ)-2, ಅಕ್ವಿಲಿನಾ-3, ಎತ್ತರ: 1.38 ಮೀ.; ಷಾಟ್‌ಪಟ್: ಟಿ. ನಿವೇತಾ-1, ಊರ್ಮಿಳಾ ಆನಂದ್ (ಬ್ರಿಗೇಡ್ ಶಾಲೆ)-2, ಸಮ್ಯನಾ ಕಾಮತ್ (ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆ)-3, ದೂರ: 9.26 ಮೀ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry