ಶುಕ್ರವಾರ, ನವೆಂಬರ್ 22, 2019
20 °C

ಡಿಎಸ್‌ಪಿ ಕೊಲೆ ಆರೋಪಿ ಬಂಧನ

Published:
Updated:

ಪ್ರತಾಪಗಡ (ಉತ್ತರ ಪ್ರದೇಶ): ಕಳೆದ ತಿಂಗಳ ಹಿಂದೆ ನಡೆದ ಡಿಎಸ್‌ಪಿ  ಜಿಯಾ-ಉಲ್-ಹಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಸಿಬಿಐ ಶನಿವಾರ ಬಂಧಿಸಿದೆ.ಈ ಕೊಲೆ ಪ್ರಕರಣವನ್ನು ಭೇದಿಸಿರುವುದಾಗಿ ಸಿಬಿಐ ಹೇಳಿಕೊಂಡಿದೆ. ಗ್ರಾಮ ಪಂಚಾಯಿತಿ ಮುಖಂಡ ದಿ.ನನ್ಹೆ ಯಾದವ್ ಅವರ ಪುತ್ರ ಬಬ್ಲೂ ಯಾದವ್ ಎಂಬಾತನನ್ನು ಬಂಧಿಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)