ಸೋಮವಾರ, ಅಕ್ಟೋಬರ್ 21, 2019
24 °C

ಡಿಕ್ಕಿ: ಮೂವರ ದುರ್ಮರಣ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ಮೈಸೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಹುಂಡಿ ಬಳಿ ಭಾನುವಾರ ರಾತ್ರಿ ಮರಕ್ಕೆ ಸ್ಕಾರ್ಪಿಯೊ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಗುಜರಾತ್ ಮೂಲದ ಗುರುಬಿಂದರ್ ಸಿಂಗ್ (35), ಕಾಮತ್ ಬಿನ್ ದುಗ್ಗಲ್ (36) ಹಾಗೂ ಮಹಿಳೆ ಸಂದೀಪ್ ಕೌರ್ (37) ಮೃತಪಟ್ಟವರು. ಜಮರ್ ಸಿಂಗ್ ದುಗ್ಗಲ್, ಗುರುಮೀತ್ ದುಗ್ಗಲ್ ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಮೈಸೂರಿನಲ್ಲಿ ಹೊಸ ವರ್ಷಾಚರಣೆ ಮುಗಿಸಿಕೊಂಡು ಭಾನುವಾರ ರಾತ್ರಿ ಊಟಿ ಕಡೆಗೆ ಪ್ರವಾಸ ಹೊರಟ್ಟಿದ್ದರು.

Post Comments (+)