ಡಿಕ್ಕಿ: ಯುವಕ ಸಾವು

ಶುಕ್ರವಾರ, ಜೂಲೈ 19, 2019
22 °C

ಡಿಕ್ಕಿ: ಯುವಕ ಸಾವು

Published:
Updated:

ಬೆಂಗಳೂರು: ಪೀಣ್ಯ ಮೇಲ್ಸೇತುವೆಯಲ್ಲಿ ಕೆಟ್ಟು ನಿಂತಿದ್ದ ಟೆಂಪೊಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಮಧುಸೂದನ್ (23) ಎಂಬ ಪ್ರಯಾಣಿಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಮೂಲತಃ ದಾವಣಗೆರೆಯವರಾದ ಮಧುಸೂದನ್, ನಗರದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.  ಶುಕ್ರವಾರ ರಾತ್ರಿ ಬಸ್‌ನಲ್ಲಿ ಊರಿಗೆ ಹೋಗುತ್ತಿದ್ದರು.10.15ರ ಸುಮಾರಿಗೆ ಪೀಣ್ಯದ ಮೇಲ್ಸೇತುವೆಗೆ ಬಂದ ಬಸ್, ಕೆಟ್ಟು ನಿಂತಿದ್ದ ಟೆಂಪೊಗೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಬಸ್‌ನ ಮುಂಭಾಗದ ಗಾಜು ಪುಡಿಪುಡಿಯಾಯಿತು. ಈ ವೇಳೆ ಮುಂದಿನ ಸೀಟಿನಲ್ಲೇ ಕುಳಿತಿದ್ದ ಮಧುಸೂದನ್, ಹೊರಗೆ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು, ಸಾವನ್ನಪ್ಪಿದ್ದಾರೆ.ಬಸ್ ಚಾಲಕ ದಯಾನಂದ್ ಕಾಲು ಮುರಿದಿದ್ದು, ಟೆಂಪೊ ಚಾಲಕ ಲಕ್ಷ್ಮೀಪತಿಗೂ ಗಾಯಗಳಾಗಿವೆ. `ಮಳೆ ಸುರಿಯುತ್ತ್ದ್ದಿದರಿಂದ ಟೆಂಪೊ ಕಾಣಲಿಲ್ಲ' ಎಂದು ಬಸ್ ಚಾಲಕ ಹೇಳಿಕೆ ಕೊಟ್ಟಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry