ಡಿಜಿಟಲ್ ಚಿತ್ರಗಳ ವರ್ಣಲೋಕ

7

ಡಿಜಿಟಲ್ ಚಿತ್ರಗಳ ವರ್ಣಲೋಕ

Published:
Updated:
ಡಿಜಿಟಲ್ ಚಿತ್ರಗಳ ವರ್ಣಲೋಕ

ಯುವ ಕಲಾವಿದರಾದ ಮಂಜು ಮೋಹನ್‌ದಾಸ್, ಸಿ.ಜೆ.ಮನುಷ್, ಪ್ರತಿಭಾ ನಂಬಿಯಾರ್ ಅವರ `ಫೋಟೊ ಸಿಂಥೆಸಿಸ್' ಹೆಸರಿನ ಡಿಜಿಟಲ್ ಫೋಟೋಗ್ರಫಿ ಪ್ರದರ್ಶನ ನಗರದಲ್ಲಿ ಮಾರ್ಚ್ 5ರವರೆಗೆ ನಡೆಯುತ್ತಿದೆ.ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಛಾಯಾಚಿತ್ರಗಳಿಗೆ ವಿವಿಧ ರೂಪಗಳನ್ನು ನೀಡಿದ್ದಾರೆ. ಆ ಮೂಲಕ ದೃಶ್ಯ ಮಾಧ್ಯಮದಲ್ಲಿ ವಿಶಿಷ್ಟ ಪ್ರಯೋಗ ನಡೆಸಿದ್ದಾರೆ. ಮಂಜು ಮೋಹನ್‌ದಾಸ್ ಅವರ ಚಿತ್ರದಲ್ಲಿ ಸೌಂದರ್ಯ ಪ್ರಜ್ಞೆಯಿದೆ. ಜೊತೆಗೆ ಚಿಂತನೆ ಇದೆ. ಎರಡು ಕೈಗಳ ಪ್ರತಿಬಿಂಬವು ಭಾವನೆಯ ದ್ವಿಗುಣತ್ವ ಪ್ರತಿಬಿಂಬಿಸುತ್ತದೆ. ಛಾಯಾಚಿತ್ರವನ್ನು ಕ್ಯಾನ್‌ವಾಸ್ ಮೇಲೆ ಮುದ್ರಿಸಿ, ಅದರ ಮೇಲೆ ತೈಲವರ್ಣ ಹಾಗೂ ಅಕ್ರಿಲಿಕ್ ಚಿತ್ರವನ್ನು ಬಿಡಿಸಿದ್ದಾರೆ. ಚಿತ್ರಕಲಾ ಪರಿಷತ್ತಿನಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಮಾಡಿರುವ ಮೋಹನ್‌ದಾಸ್ ಅನೇಕ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಇವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿಗಳೂ ಲಭಿಸಿವೆ.ಸೃಷ್ಟಿ ಕಲಾಶಾಲೆಯ ಪದವಿ ವಿದ್ಯಾರ್ಥಿಯಾಗಿರುವ ಮನುಷ್ ಅವರ ಕಲಾಕೃತಿಗಳಲ್ಲಿ ಮಾನವನ ದೇಹದ ಚಿತ್ರಗಳು ಚಿಂತನೆಗೆ ಹಚ್ಚುತ್ತವೆ. `ಮಾನವ ದೇಹ' ಅವರ ಆಸಕ್ತಿ ಕ್ಷೇತ್ರವಾಗಿದೆ. ಇವರು ಡಿಜಿಟಲ್ ಶಿಲ್ಪಕಲಾಕೃತಿಗಳನ್ನೂ ರಚಿಸುತ್ತಾರೆ. ದೇಹವನ್ನು ಬಗ್ಗಿಸಿದರೆ ಯಾವ ಯಾವ ಅಂಗಗಳು ಕೆಲಸ ನಿರ್ವಹಿಸುತ್ತವೆ ಎಂಬುದನ್ನು ಚಿತ್ರಗಳಲ್ಲಿ ಸೆರೆಹಿಡಿಯುವ ಪ್ರಯತ್ನ ಇವರದ್ದು. ಡಿಜಿಟಲ್ ಚಿತ್ರಗಳನ್ನು ಕ್ಯಾನ್‌ವಾಸ್ ಮೇಲೆ ಮುದ್ರಿಸಿ ಪ್ರದರ್ಶನ ಮಾಡಲಾಗುತ್ತಿದೆ.ಮತ್ತೊಬ್ಬ ಕಲಾವಿದೆ ಪ್ರತಿಭಾ ನಂಬಿಯಾರ್ ಅವರ ವಸ್ತು ವಿಷಯ ಇನ್ನೂ ಭಿನ್ನ. ತೆಂಗಿನಕಾಯಿಯ ಹೀಚು ಹಾಗೂ ಅದರ ಪ್ರತಿಬಿಂಬದ ಚಿತ್ರ ಬಿಡಿಸಿದ್ದಾರೆ. ಅದೂ ಡಿಜಿಟಲ್ ಛಾಯಾಚಿತ್ರ. ಒಂದು ವಸ್ತುವಿನ ಇತಿಹಾಸವನ್ನು ಛಾಯಾಚಿತ್ರಗಳಲ್ಲಿ ತಿಳಿಸುವ ಒಳನೋಟ ಇವರ ಪ್ರದರ್ಶನದಲ್ಲಿ ಎದ್ದು ಕಾಣುತ್ತದೆ. ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಭಾ ಅವರ ಚಿತ್ರಗಳು ಅನೇಕ ಪ್ರದರ್ಶನಗಳಲ್ಲಿ ಗಮನ ಸೆಳೆದಿವೆ. ಡಿಜಿಟಲ್ ಚಿತ್ರದ ಜೊತೆಗೆ ಐದು ತೈಲವರ್ಣ ಚಿತ್ರಗಳಿವೆ.ಸ್ಥಳ: ಫೈವ್ ಫಾರ್ಟಿ ಫೈವ್, 545, 6ನೇ ಮುಖ್ಯರಸ್ತೆ, 4ನೇ ಕ್ರಾಸ್, ಇಂದಿರಾನಗರ 2ನೇ ಹಂತ. ಬೆಳಿಗ್ಗೆ11ರಿಂದ ಸಂಜೆ 6ರವರೆಗೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry