ಡಿಜಿಟಲ್ ಪ್ರಕಾಶನ: ಫೇಸ್‌ಬುಕ್ ಕಣ್ಣು

7

ಡಿಜಿಟಲ್ ಪ್ರಕಾಶನ: ಫೇಸ್‌ಬುಕ್ ಕಣ್ಣು

Published:
Updated:
ಡಿಜಿಟಲ್ ಪ್ರಕಾಶನ: ಫೇಸ್‌ಬುಕ್ ಕಣ್ಣು

ಮುಂದಿನ ತಲೆಮಾರಿನ ಡಿಜಿಟಲ್ ಪುಸ್ತಕ ಪ್ರಕಾಶನ ಸಂಸ್ಥೆ ಎಂಬ ಹೆಗ್ಗಳಿಕೆಯ `ಪುಷ್ ಪಾಪ್ ಪ್ರೆಸ್~ ಅನ್ನು  (push pop press)  ಖ್ಯಾತ ಸಾಮಾಜಿಕ ಶೋಧ ತಾಣ `ಫೇಸ್‌ಬುಕ್~ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿದೆ.ಜಗತ್ತಿನಾದ್ಯಂತ ಇರುವ ತನ್ನ ಆನ್‌ಲೈನ್ ಬಳಕೆದಾರರನ್ನು ಡಿಜಿಟಲ್ ಪುಸ್ತಕಗಳ ಮೂಲಕ ಇನ್ನಷ್ಟು ಹತ್ತಿರಕ್ಕೆ ತಲುಪುವುದು ಈ ಸ್ವಾಧೀನ ಪ್ರಕ್ರಿಯೆ ಹಿಂದಿನ ಉದ್ದೇಶ. ಫೇಸ್‌ಬುಕ್‌ನ ನಡೆಯಿಂದ ಅನೇಕ ಡಿಜಿಟಲ್ ಪ್ರಕಾಶನ ಸಂಸ್ಥೆಗಳು ಇಕ್ಕಟ್ಟಿಗೆ ಸಿಲುಕಿವೆ. ಸದ್ಯ 75 ಕೋಟಿ ಬಳಕೆದಾರರಿರುವ `ಫೇಸ್‌ಬುಕ್~ ಪುಷ್  ಪಾಪ್ ಮೂಲಕ ಹೊಸ ಮಾರುಕಟ್ಟೆ ಅನ್ವೇಷಣೆಯಲ್ಲಿದೆ. ಇದನ್ನು ಫೇಸ್‌ಬುಕ್ ನಡೆಸಿರುವ ಅತ್ಯಂತ ಜಾಣತನದ ಸ್ವಾಧೀನ ಪ್ರಕ್ರಿಯೆ ಎಂದೇ ಕಾರ್ಪೊರೇಟ್ ವಲಯ ಬಣ್ಣಿಸುತ್ತಿದೆ.`ಪುಷ್ ಪಾಪ್~ ಇ-ಬುಕ್ ಪ್ರಕಾಶನದ ಜತೆಗೆ, ಡಿಜಿಟಲ್ ಪುಸ್ತಕಗಳನ್ನು ಓದಲು ಬೇಕಾದ ಅಪ್ಲಿಕೇಷನ್ಸ್ ಅನ್ನೂ ಅಭಿವೃದ್ಧಿಪಡಿಸುತ್ತದೆ. ಬಹುಮಾಧ್ಯಮ ಮೂಲಕ (ಆಡಿಯೊ, ವಿಡಿಯೊ, ಇಮೇಜಸ್) ಡಿಜಿಟಲ್ ಪುಸ್ತಕಗಳನ್ನು ಓದಬಹುದಾದ ಈ ತಂತ್ರಜ್ಞಾನ ಗ್ರಾಹಕರಿಗೆ ಅನನ್ಯ ಅನುಭವ ಒದಗಿಸಲಿದೆ.ಇತ್ತೀಚೆಗೆ `ಫೇಸ್‌ಬುಕ್~ನಲ್ಲಿ ಪೌರ ಪತ್ರಿಕೋದ್ಯಮ ಹೆಚ್ಚು ಜನಪ್ರಿಯವಾಗುತ್ತಿದ್ದು,  `ಸಾಮಾಜಿಕ ದಿನಪತ್ರಿಕೆ~   (social newspaper )  ಕಲ್ಪನೆಯೂ  ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ `ಪುಷ್ ಪಾಪ್~ ಪತ್ರಕರ್ತರಿಗೂ ಅನುಕೂಲ ಕಲ್ಪಿಸಲಿದೆ.ಇದರ ಜತೆಗೆ ಬರಹಗಾರರು ತಾವು ಬರೆದ ಲೇಖನಗಳನ್ನು ಪ್ರಕಟಿಸಲೂ ಇದು ವೇದಿಕೆ ಒದಗಿಸಲಿದೆ. ಫೇಸ್‌ಬುಕ್ ಬಳಕೆದಾರರು ಕಥೆ, ಕವನ, ಚಿತ್ರಗಳನ್ನೂ ಕೂಡ ಮುದ್ರಣದ ಖರ್ಚಿಲ್ಲದೆ ಹೊರತರಬಹುದಾಗಿದೆ.ಮೈಕ್ ಮ್ಯಾಟಸ್ ಮತ್ತು ಕಿಮೊನ್ ತ್ಸಿಂತೆರಿಸ್ ಪುಷ್  ಪಾಪ್‌ನ ಸಹ ಸ್ಥಾಪಕರು. ಇವರಿಬ್ಬರು ಆ್ಯಪಲ್ ಸಂಸ್ಥೆಯ ಮಾಜಿ ಎಂಜಿನಿಯರ್‌ಗಳು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry