ಡಿಜಿಪಿ ನೇಮಕ ವಿವಾದ: ಕಾಯ್ದಿರಿಸಿದ ತೀರ್ಪು

ಬುಧವಾರ, ಜೂಲೈ 24, 2019
28 °C

ಡಿಜಿಪಿ ನೇಮಕ ವಿವಾದ: ಕಾಯ್ದಿರಿಸಿದ ತೀರ್ಪು

Published:
Updated:

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಹಂಗಾಮಿ ಡಿಜಿಪಿ ಡಾ. ಎಸ್. ಟಿ.ರಮೇಶ್ ಅವರು ಸಲ್ಲಿಸಿರುವ ಅರ್ಜಿಗೆ ಮಾನ್ಯತೆ ಇದೆಯೇ, ಇಲ್ಲವೇ ಎಂಬುದರ ಕುರಿತಾದ ಅರ್ಜಿಯ ತೀರ್ಪನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ)ಯ ರಾಜ್ಯ ಘಟಕ ಕಾಯ್ದಿರಿಸಿದೆ.ಈ ಹುದ್ದೆಯ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗವು ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ದೂರಿ ಎಸ್. ಟಿ.ರಮೇಶ್ ಅವರು ಸಲ್ಲಿಸಿರುವ ಅರ್ಜಿ ಇದಾಗಿದೆ.  ಡಿಜಿಪಿ ದರ್ಜೆಯ ಅಧಿಕಾರಿಗಳಾದ ನೀಲಂ ಅಚ್ಯುತ ರಾವ್ ಹಾಗೂ ಡಾ.ಡಿ.ವಿ.ಗುರುಪ್ರಸಾದ್ ಅವರ ಹೆಸರುಗಳನ್ನು ಮಾತ್ರ ಆಯೋಗ ಕಳುಹಿಸಿಕೊಟ್ಟಿದ್ದು, ಇದು ಕಾನೂನುಬಾಹಿರ ಎನ್ನುವುದು ಅವರ ವಾದ.ಈ ಕುರಿತು ಕೆಲ ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ಆಧರಿಸಿ ಅವರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿರುವುದು ಸಿಎಟಿಯ ಉಪಾಧ್ಯಕ್ಷ ಎನ್. ಡಿ.ರಾಘವನ್ ನೇತೃತ್ವದ ಪೀಠದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ವರದಿಯ ಆಧಾರದ ಮೇಲೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬೇಕೇ, ಬೇಡವೇ ಎಂಬ ಬಗ್ಗೆ ತೀರ್ಪನ್ನು ಅದು ಕಾಯ್ದಿರಿಸಿದೆ. `ಆಯೋಗವು ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ ಹೆಸರಿನ ಪಟ್ಟಿಯು ಇನ್ನೂ ಮೊಹರು ಮಾಡಿದ ಲಕೋಟೆಯಲ್ಲಿಯೇ ಇದೆ. ಅರ್ಜಿದಾರರ ಹೆಸರು ಅದರಲ್ಲಿ ಇದೆಯೋ ಇಲ್ಲವೋ ಎಂಬ ಬಗ್ಗೆ ಉಲ್ಲೇಖಿಸುವ ಯಾವುದೇ ದಾಖಲೆಗಳೂ ಇಲ್ಲ. ಕೇವಲ ಪತ್ರಿಕೆಯಲ್ಲಿ ಬಂದಿರುವ ವರದಿಯ ಆಧಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry