ಡಿಜಿಪಿ ಬಂಧನಕ್ಕೆ ಇಂಟರ್‌ಪೋಲ್ ನೆರವು?

7

ಡಿಜಿಪಿ ಬಂಧನಕ್ಕೆ ಇಂಟರ್‌ಪೋಲ್ ನೆರವು?

Published:
Updated:

ನವದೆಹಲಿ (ಪಿಟಿಐ): ನಕಲಿ ಎನ್‌ಕೌಂಟರ್‌ನಲ್ಲಿ ಸ್ಥಳೀಯ ಮದ್ಯ ಕಳ್ಳಸಾಗಣೆದಾರನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ರಾಜಸ್ತಾನದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಕೆ. ಜೈನ್ ಅವರನ್ನು ಬಂಧಿಸಲು ಸಿಬಿಐ ಇಂಟರ್‌ಪೋಲ್ ನೆರವು ಕೋರುವ ಸಾಧ್ಯತೆ ಇದೆ.ಜಾಮೀನು ರಹಿತ ಬಂಧನ ವಾರೆಂಟ್ ಎದುರಿಸುತ್ತಿರುವ ಜೈನ್ ಅವರನ್ನು ಸಿಬಿಐ ಈಗಾಗಲೆ ತಪ್ಪಿತಸ್ಥ ಎಂದು ಘೋಷಿಸಿದ್ದು, ಜೈನ್ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಹೇಳಿದೆ. 

ಜೈನ್ ಅವರು ಸಿಂಗಪುರಕ್ಕೆ ಪಲಾಯನ ಮಾಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸಿಬಿಐ ಚಿಂತನೆ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry