ಡಿಜಿಪಿ ವಿವಾದ: ಕುತೂಹಲಕರ ತಿರುವು

7

ಡಿಜಿಪಿ ವಿವಾದ: ಕುತೂಹಲಕರ ತಿರುವು

Published:
Updated:

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಹುದ್ದೆ ನೇಮಕ ವಿವಾದ ಕುತೂಹಲ ತಿರುವು ಪಡೆದುಕೊಂಡಿದೆ. ಅರ್ಜಿ ವಿಚಾರಣೆಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿ ಶಂಕರ ಬಿದರಿ ಹೈಕೋರ್ಟ್‌ಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ಕುಮಾರ್ ಹಾಗೂ ಎಚ್.ಎಸ್.ಕೆಂಪಣ್ಣ ಅವರ ವಿಭಾಗೀಯ ಪೀಠ ನಡೆಸುತ್ತಿದೆ.  ಈ ಅರ್ಜಿಯನ್ನು ಮಾನ್ಯ ಮಾಡಬೇಕೆ ಅಥವಾ ವಜಾ ಮಾಡಬೇಕೆ ಎಂಬ ಬಗ್ಗೆ ಪೀಠವು ಗುರುವಾರ (ಮೇ 17) ವಿಚಾರಣೆ ನಡೆಸಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry