ಡಿಜಿಸಿಎ ಎದುರು ಹಾಜರಾದ ಕಿಂಗ್ ಫಿಶರ್ ಅಧಿಕಾರಿ

7

ಡಿಜಿಸಿಎ ಎದುರು ಹಾಜರಾದ ಕಿಂಗ್ ಫಿಶರ್ ಅಧಿಕಾರಿ

Published:
Updated:

ನವದೆಹಲಿ (ಫಿಟಿಐ): ಸಂಕಷ್ಟದಲ್ಲಿ ಸಿಲುಕಿರುವ ಕಿಂಗ್‌ಫಿಶರ್ ಕಂಪೆನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಂಜಯ್ ಅಗರ್‌ವಾಲ್ ಅವರು, ತಮ್ಮ ಕಂಪೆನಿಯ ವಿಮಾನಗಳ ಹಾರಾಟದಲ್ಲಿನ ವ್ಯತ್ಯಾಸದಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆಗಳ ನಿವಾರಣೆ ಮತ್ತು ಕಂಪೆನಿಯ ಆರ್ಥಿಕ ಸಂಕಷ್ಟಗಳ ಬಗ್ಗೆ  ಕಂಪೆನಿಯು ಕೈಗೊಂಡ ಸುಧಾರಣಾ ಕ್ರಮಗಳ ವಿವರಗಳನ್ನು ಮಂಗಳವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ದ ಗಮನಕ್ಕೆ ತಂದಿದ್ದಾರೆ.

ಈ ಬೆಳವಣಿಗೆಯ ಮಧ್ಯೆಯೂ ಮಂಗಳವಾರ, ಕಿಂಗ್‌ಫಿಷರ್ ವಿಮಾನ ಕಂಪೆನಿಯ ಸುಮಾರು 30ಕ್ಕೂ ಅಧಿಕ  ವಿಮಾನಗಳ ಹಾರಾಟವನ್ನು ರದ್ದು ಪಡಿಸಿದೆ.

 ನಾಗರಿಕ ವಿಮಾನಯಾನ ನಿರ್ದೇಶನಾಲಯದ ಎದುರು ಹಾಜರಾಗಿ ಹೇಳಿಕೆ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕಿಂಗ್‌ಫಿಶರ್ ಕಂಪೆನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಂಜಯ್ ಅಗರ್‌ವಾಲ್ ಅವರು, ನಿರ್ದೇಶನಾಲಯವು ಕೇಳುವ ಎಲ್ಲಾ ಪ್ರಶ್ನೆಗಳಿಗೂ ತಾವು ಉತ್ತರಿಸುವುದಾಗಿ ಹೇಳಿದರು.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಿಂಗ್ ಫಿಶರ್ ವಿಮಾನಯಾನಗಳ ಅಸ್ತವ್ಯಸ್ತತೆ ಬಗ್ಗೆ ವಿವರಣೆ ನೀಡುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಕಿಂಗ್ ಫಿಶರ್ ವಿಮಾನ ಯಾನ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಉನ್ನತ ಅಧಿಕಾರಿಗಳಿಗೆ ಸೋಮವಾರ ಸಮನ್ಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

 


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry