ಶುಕ್ರವಾರ, ನವೆಂಬರ್ 22, 2019
23 °C

ಡಿಜಿಸಿಎ ಬದಲಿಗೆ ಸಿಎಎ:ಕರಡು ಮಸೂದೆ ಸಿದ್ಧ

Published:
Updated:

ನವದೆಹಲಿ (ಪಿಟಿಐ): ನಾಗರಿಕ ವಿಮಾನ ಯಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ(ಡಿಜಿಸಿಎ) ಬದಲಿಗೆ ಹೊಸ ವಿಮಾನಯಾನ ಪ್ರಾಧಿಕಾರವನ್ನು ರಚನೆಗೆ ಸರ್ಕಾರ ಮುಂದಾಗಿದ್ದು, ಈ ಹೊಸ ಪ್ರಾಧಿಕಾರ ಮಸೂದೆಯನ್ನು ಇದೇ ತಿಂಗಳಲ್ಲಿ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಮಂಡಿಸಲಾಗುತ್ತಿದೆ.ಹೊಸ ಪ್ರಾಧಿಕಾರಕ್ಕೆ `ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಎಂದು ಹೆಸರಿಸಲಾಗಿದೆ. ಈ ಹೊಸ ಪ್ರಾಧಿಕಾರ ನಾಗರಿಕ ವಿಮಾನಯಾನದ ಸುರಕ್ಷತೆಯ ಉಸ್ತುವಾರಿ ಜೊತೆಗೆ ಅಚಾತುರ್ಯದಿಂದ ಉಂಟಾಗುವ ವಿಮಾನಗಳ ಹಾರಾಟ ವ್ಯತ್ಯಯವನ್ನು ಸರಿಪಡಿಸುವ ಜವಾಬ್ದಾರಿ ಹೊಂದಿದೆ.

ಪ್ರತಿಕ್ರಿಯಿಸಿ (+)