ಡಿಜಿ ಕ್ಲಾಸ್‌ಗೆ ವಾಸುದೇವಮೂರ್ತಿ ಚಾಲನೆ

ಶುಕ್ರವಾರ, ಜೂಲೈ 19, 2019
26 °C

ಡಿಜಿ ಕ್ಲಾಸ್‌ಗೆ ವಾಸುದೇವಮೂರ್ತಿ ಚಾಲನೆ

Published:
Updated:

ಮೈಸೂರು: ಆಧುನಿಕ ಶಿಕ್ಷಣ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಮಹಾಜನ ಶಿಕ್ಷಣ ಸೊಸೈಟಿ ಅಧ್ಯಕ್ಷ ಆರ್.ವಾಸುದೇವಮೂರ್ತಿ ಸಲಹೆ ನೀಡಿದರು.ನಗರದ ರೋಟರಿ ಪಶ್ಚಿಮ ಶಾಲೆಯಲ್ಲಿ ಮಂಗಳವಾರ ಡಿಜಿ ಕ್ಲಾಸ್ ಅನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಪರಿಣಾಮಕಾರಿಯಾಗಿ ಬೋಧಿಸಬಹುದು. ಪಠ್ಯದ ಪ್ರತಿ ಯೊಂದು ಮಾಹಿತಿ, ಚಿತ್ರಗಳನ್ನು ಡಿಜಿ ಟಲ್ ಬೋರ್ಡ್ ಮೇಲೆ ಮೂಡಿಸುವು ದರಿಂದ ಮಕ್ಕಳಿಗೆ ಸಹಜವಾಗಿ ಆಸಕ್ತಿ ಮೂಡುತ್ತದೆ. ರೋಟರಿ ಸಂಸ್ಥೆ ಅಪಾರ ಹಣ ವೆಚ್ಚ ಮಾಡಿ ಇಂಥ ಆಧುನಿಕ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿ ಸಿರುವುದು ಶ್ಲಾಘನೀಯ ಎಂದರು.ರೋಟರಿ ಪಶ್ಚಿಮ ಸಂಸ್ಥೆಯ ಗೌರವ ಅಧ್ಯಕ್ಷ ರಾಜಗೋಪಾಲ್ ಡಿಜಿ ತರಗತಿಯ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟರು. ವಿಜ್ಞಾನ ಶಿಕ್ಷಕ ಜಿತೇಂದ್ರ ವಿಜ್ಞಾನ  ಪಠ್ಯಬೋಧಿಸುವ ಮೂಲಕ ಶುಭಾರಂಭ ಮಾಡಿದರು.ಶ್ರೀಧರ್‌ರಾಜ್ ಅರಸ್, ಕಲ್‌ಮರಡಪ್ಪ, ವಿದ್ಯಾರಣ್ಯ, ವಿಜಯ್‌ಕುಮಾರ್, ಆರ್‌ಡಬ್ಲ್ಯುಎ ಗೌರವ ಕಾರ್ಯದರ್ಶಿ ಸಿ.ಎನ್.ಜಿ. ಕೃಷ್ಣನ್, ಮುಖ್ಯ ಶಿಕ್ಷಕಿ ಶಾಂತನಾಯ್ಡು, ಆಡಳಿತಾಧಿಕಾರಿ ಮಹದೇವಯ್ಯ, ಎಜುರೈಟ್ ಸಂಸ್ಥೆಯ ನಾಗೇಶ್, ನದೀಮ್, ಶ್ರೀಭೂಷಣ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry