ಸೋಮವಾರ, ಸೆಪ್ಟೆಂಬರ್ 16, 2019
29 °C

ಡಿಟಿಎಚ್‌ಗೂ ಬಂತು ಪೋರ್ಟೆಬಿಲಿಟಿ

Published:
Updated:

ಮೊಬೈಲ್ ಪೊರ್ಟೆಬಿಲಿಟಿ ಈಗ ಮೊಬೈಲ್ ಫೋನ್ ಬಳಕೆದಾರರಿಗೆ ಅಪರಿಚಿತವೇನಲ್ಲ. ಯಾವುದೇ ಮೊಬೈಲ್ ಸೇವಾ ಸಂಸ್ಥೆಯ ಚಂದಾದಾರರಾಗಿದ್ದರೂ ಹಳೆಯ ನಂಬರನ್ನೇ ಉಳಿಸಿಕೊಂಡು ಇನ್ನೊಂದು ಸಂಸ್ಥೆಗೆ ಸ್ಥಳಾಂತರಗೊಳ್ಳುವ `ಪೋರ್ಟೆಬಿಲಿಟಿ~ ಸಾಕಷ್ಟು ಜನಪ್ರಿಯವೂ ಆಗಿದೆ. ಇದರಿಂದ ಮೊಬೈಲ್ ಕಂಪೆನಿಗಳ ಸೇವೆಯ ಗುಣಮಟ್ಟವೂ ಸಾಕಷ್ಟು ಸುಧಾರಿಸಿದೆ.ಅಂಥದೇ ಸೌಲಭ್ಯ ಈಗ ಡಿಟಿಎಚ್‌ನಲ್ಲೂ (ಡೈರೆಕ್ಟ್ ಟು ಹೋಮ್) ಪ್ರಾರಂಭವಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎನ್ನುತ್ತದೆ ಈ ಸೇವೆಯನ್ನು ಪರಿಚಯಿಸುತ್ತಿರುವ ಡಿಶ್ ಟಿವಿ. ಅದು ಡಿಶ್ ಫ್ರೀಡಮ್ ಎಂಬ ಕಂಡೀಷನಲ್ ಆಕ್ಸಸ್ ಮಾಡ್ಯೂಲ್ ಡಿವೈಸ್ ಬಿಡುಗಡೆ ಮಾಡಿದೆ.ನಿಮ್ಮ ಬಳಿ ಯಾವುದೇ ಆಪರೇಟರ್‌ರ ಸೆಟ್ ಟಾಪ್ ಬಾಕ್ಸ್ ಇದ್ದರೂ ಅದರಲ್ಲಿ ಡಿಶ್ ಸಿಎಎಂ ಜೋಡಿಸಿಕೊಂಡರೆ ಸಾಕು. ಡಿಶ್ ಟಿವಿಯ ಸೇವೆಯನ್ನು ಪಡೆಯಬಹುದು.`ಟ್ರಾಯ್‌ನ ಡಿಟಿಎಚ್ ಪರವಾನಗಿ ನಿಯಮಗಳ ಪ್ರಕಾರ ಗ್ರಾಹಕರಿಗೆ ಆಪರೇಟರ್‌ಗಳನ್ನು ಬದಲಾಯಿಸಿಕೊಳ್ಳುವ ಆಯ್ಕೆ ನೀಡುವುದು ಕಡ್ಡಾಯ. ಅಲ್ಲದೆ ಎಲ್ಲಾ ಆಪರೇಟರ್‌ಗಳು ಈ ರೀತಿ ಬದಲಾವಣೆಗೆ ಅನುಕೂಲವಾಗುವ ಸೆಟ್ ಟಾಪ್ ಬಾಕ್ಸ್ ನೀಡುವುದು ಸಹ ಕಡ್ಡಾಯ. ಈ ಆಯ್ಕೆಯನ್ನು ಬಳಸಿಕೊಳ್ಳಲು ನಾವು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಭಾರತೀಯ ಡಿಟಿಎಚ್ ಅಧ್ಯಾಯವನ್ನೇ ಬದಲಿಸುವ ಈ ಉತ್ಪನ್ನಕ್ಕೆ 990 ರೂ ಬೆಲೆ ನಿಗದಿಪಡಿಸಿದ್ದೇವೆ~ ಎನ್ನುತ್ತಾರೆ ಡಿಶ್ ಟಿವಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ಜವಹರ್ ಗೋಯಲ್.ದೇಶದಲ್ಲಿ 330 ಲಕ್ಷ ಡಿಟಿಎಚ್ ಚಂದಾದಾರರಿದ್ದಾರೆ. ಅವರಲ್ಲಿ ಶೇ 20ರಷ್ಟು ಜನ ತಾವು ಚಂದಾದಾರರಾಗಿರುವ ಡಿಟಿಎಚ್ ಸೇವೆಯನ್ನೇ ಬಳಸಿಕೊಳ್ಳುತ್ತಿಲ್ಲ. ಏಕೆಂದರೆ ಆ ಕಂಪೆನಿಯ ಸೇವೆ ಅವರಿಗೆ ತೃಪ್ತಿ ತರದೇ ಇರಬಹುದು. ಅವರನ್ನು ತಲುಪಲು ಡಿಶ್ ಪ್ರಯತ್ನಿಸುತ್ತಿದೆ ಎನ್ನುವುದು ಅವರ ವಿವರಣೆ.  

Post Comments (+)