ಡಿ.ಟಿ.ಎಸ್‌ನಲ್ಲಿ ‘...ಮಮತೆಯ ಕರೆಯೋಲೆ’

7

ಡಿ.ಟಿ.ಎಸ್‌ನಲ್ಲಿ ‘...ಮಮತೆಯ ಕರೆಯೋಲೆ’

Published:
Updated:

ಮೀನಾ ತೂಗುದೀಪ ಶ್ರೀನಿವಾಸ್ ನಿರ್ಮಿಸುತ್ತಿರುವ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 48 ದಿನಗಳ ಚಿತ್ರೀಕರಣ ಮುಗಿದಿದೆ.ಸದ್ಯ ಮಂಜರಿ ಸಿನಿಮ್ಯಾಟಿಕ್ಸ್‌ನಲ್ಲಿ ಚಿತ್ರಕ್ಕೆ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಾಲ್ಕನೇ ಚಿತ್ರವಾಗಿ ‘ಮದುವೆಯ ಮಮತೆಯ ಕರೆಯೋಲೆ’ ನಿರ್ಮಾಣವಾಗುತ್ತಿದೆ. ಗೀತಸಾಹಿತಿ ಕವಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆಯೂ ಅವರದೇ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಕಲೈ, ಮುರಳಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ.ತಾರಾಬಳಗದಲ್ಲಿ ಅನಂತನಾಗ್, ಅಮೂಲ್ಯ, ಸೂರಜ್, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮನದೀಪ್ ರಾಯ್, ಶೋಭರಾಜ್ ಚಿತ್ರಾ ಶೆಣೈ, ಸಂಗೀತಾ, ಚಿಕ್ಕಣ್ಣ, ಸುಂದರ್, ಶಾಲಿನಿ, ಸ್ವಾತಿ, ಯೋಗೀಶ್ ರಾಜ್ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry