ಶುಕ್ರವಾರ, ನವೆಂಬರ್ 15, 2019
20 °C

ಡಿಪ್ಲೊಮಾ ಕೌನ್ಸೆಲಿಂಗ್ ಆರಂಭ

Published:
Updated:

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಡಿಪ್ಲೊಮಾ ಕೌನ್ಸೆಲಿಂಗ್ ಪ್ರಕ್ರಿಯೆಯು ಶುಕ್ರವಾರ ರಾಜ್ಯದ 11 ಕೇಂದ್ರಗಳಲ್ಲಿ ಏಕಕಾಲಕ್ಕೆ ಆರಂಭಗೊಂಡಿತು.ನೋಡಲ್ ಕೇಂದ್ರವಾದ ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಸಹ ಬೆಳಿಗ್ಗೆ 9ಕ್ಕೆ ಆನ್‌ಲೈನ್ ಕೌನ್ಸೆಲಿಂಗ್‌ಗೆ ಚಾಲನೆ ದೊರೆಯಿತು. ಮೊದಲ ದಿನ ಅಂಗವಿಕಲರು ಹಾಗೂ ಜೂನಿಯರ್ ಟೆಕ್ನಿಕಲ್ ಶಾಲೆಯ ಕೋಟಾದಡಿ ಕೌನ್ಸೆಲಿಂಗ್ ನಡೆಯಿತು. ಅಂಗವಿಕಲರ ಕೋಟಾದಡಿ ಒಟ್ಟು 29 ಅಭ್ಯರ್ಥಿಗಳು ಪ್ರವೇಶ ಪಡೆದರು.ಹೀಗಿದೆ ಕೌನ್ಸೆಲಿಂಗ್

ಕೌನ್ಸೆಲಿಂಗ್‌ಗಾಗಿ ನೋಡಲ್ ಕೇಂದ್ರಗಳಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಮೊದಲು ಪ್ರೀ-ಕೌನ್ಸೆಲಿಂಗ್ ಹಾಲ್‌ನಲ್ಲಿ ವಿದ್ಯಾರ್ಥಿಗಳಿಗೆ ಒಟ್ಟಾರೆ ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಲಾಗುತ್ತದೆ. ನಂತರ ವಿದ್ಯಾರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ನಡೆಯುತ್ತದೆ. ಅನಂತರ ಅವರ ದಾಖಲಾತಿ ಪರಿಶೀಲನೆ ನಡೆ ಯುತ್ತದೆ.ಈ ಸಂದರ್ಭ ಆನ್‌ಲೈನ್ ಕೌನ್ಸೆಲಿಂಗ್‌ಗೆ ಅಗತ್ಯವಾದ ಸಿಡಿ ಹಾಗೂ ಪ್ರತ್ಯೇಕ ಪಾಸ್‌ವರ್ಡ್ ನೀಡಲಾಗುತ್ತದೆ. ನಂತರ ನಿರೀಕ್ಷಣಾ ಕೊಠಡಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅಲ್ಲಿ ವಿವಿಧ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ಕುರಿತು ಮಾಹಿತಿ ದೊರೆಯತ್ತದೆ. ಅಲ್ಲಿ ತಮಗೆ ನೀಡ ಲಾಗುವ ಅರ್ಜಿಯಲ್ಲಿ ವಿದ್ಯಾರ್ಥಿಗಳು ಆದ್ಯತೆ ಮೇರೆಗೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ. ನಂತರ ಲಭ್ಯತೆಗೆ ಅನುಸಾರವಾಗಿ ಸೀಟು ದೊರೆಯಲಿದೆ. ಸೀಟು ಸಿಕ್ಕ ಬಗ್ಗೆ ಸ್ಥಳದಲ್ಲಿಯೇ ಪತ್ರ ದೊರೆಯಲಿದ್ದು, ಅಲ್ಲಿಯೇ ಪ್ರವೇಶಾತಿ ಶುಲ್ಕ ತುಂಬುವ ವ್ಯವಸ್ಥೆ ಇದೆ.`ಈ ವರ್ಷದ ರಾಜ್ಯದ 219 ಡಿಪ್ಲೊಮಾ ಕಾಲೇಜುಗಳಲ್ಲಿ ಸುಮಾರು 43,000 ಸಾವಿರ ಸೀಟುಗಳು ಲಭ್ಯವಿದೆ. ಒಟ್ಟು 52,827 ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದ 11 ಕೇಂದ್ರಗಳಲ್ಲೂ ಏಕಕಾಲಕ್ಕೆ ಆನ್‌ಲೈನ್ ಮುಖಾಂತರ ಕೌನ್ಸೆಲಿಂಗ್ ನಡೆಯಲಿದೆ.ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವ ನೋಡಲ್ ಕೇಂದ್ರ ದಲ್ಲಿ ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳ ಬಹುದಾಗಿದೆ. ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಪಡೆವವರಿಗೆ ರೂ. 2460 ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಪಡೆಯುವವರಿಗೆ ರೂ. 3510 ಶುಲ್ಕ ನಿಗದಿಪಡಿಸಲಾಗಿದೆ~ ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಸುರೇಶ ಅಳ್ಳಗಿ ಹಾಗೂ ನೋಡಲ್ ಅಧಿಕಾರಿ ಎಸ್.ಟಿ. ಭೈರಪ್ಪನವರ ತಿಳಿಸಿದರು.ಶುಕ್ರವಾರ ನಡೆದ ಕೌನ್ಸೆಲಿಂಗ್‌ನಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದರು. ಇದೇ 13ರವರೆಗೆ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕೌನ್ಸೆಲಿಂಗ್ ನಡೆಯಲಿದೆ. 9ರಿಂದ ಸಾಮಾನ್ಯ ವರ್ಗದ ಕೌನ್ಸೆಲಿಂಗ್ ಆರಂಭಗೊಳ್ಳಲಿದೆ.

ಕೌನ್ಸೆಲಿಂಗ್ ವೇಳಾಪಟ್ಟಿ


ಜು. 7:  ಮಾಜಿ ಸೈನಿಕರು, ಹಾಗೂ

ಸೈನಿಕರ  ಕೋಟಾದಲ್ಲಿ ಅರ್ಜಿ ಸಲ್ಲಿಸಿದವರು

ಜು. 9: 001ರಿಂದ 1200 ರ‌್ಯಾಂಕ್‌ವರೆಗೆ

ಜು.10: 1201ರಿಂದ 3000 ರ‌್ಯಾಂಕ್‌ವರೆಗೆ

ಜು. 11- 3001ರಿಂದ 5000

ರ‌್ಯಾಂಕ್ ವರೆಗೆ

ಜು.12- 5001ರಿಂದ 7000

ರ‌್ಯಾಂಕ್‌ವರೆಗೆ

ಜು.13-  7001ರಿಂದ 9000

ರ‌್ಯಾಂಕ್‌ವರೆಗೆ

(ನಂತರದ ರ್‍ಯಾಂಕ್ ಪಡೆದವರ ಕೌನ್ಸೆಲಿಂಗ್

ದಿನಾಂಕವನ್ನು ವೃತ್ತಿ ಶಿಕ್ಷಣ ಇಲಾಖೆಯು   

ಇದೇ 11ರಂದು ಪ್ರಕಟಿಸಲಿದೆ) 

ಪ್ರತಿಕ್ರಿಯಿಸಿ (+)