ಡಿಪ್ಲೊಮಾ: ಕ್ಯಾರಿ ಓವರ್ ಪದ್ಧತಿ ಜಾರಿಗೆ ಮನವಿ
ಗುಲ್ಬರ್ಗ: ಡಿಪ್ಲೊಮಾ ವಿದಾರ್ಥಿಗಳಿಗೆ ಹೊರಡಿಸಿದ ಹೊಸ ಕ್ಯಾರಿ ಓವರ್ ಪದ್ದತಿ ಕೈ ಬಿಟ್ಟು ಹಳೆಯ ಕ್ಯಾರಿ ಓವರ್ ಪದ್ದತಿ ಜಾರಿಗೊಳಿಸುವಂತೆ ಒತ್ತಾಯಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ, ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಯವರಿಗೆ ಸಚಿವ ರಾಜು ಗೌಡರ ಮೂಲಕ ಸುರಪುರದಲ್ಲಿ ಭಾನುವಾರ ಮನವಿ ಸಲ್ಲಿಸಿತು.
ಮೊದಲ ಕ್ಯಾರಿ ಓವರ್ ಪದ್ಧತಿ ಒಮ್ಮಿಂದೊಮ್ಮೆ ಕೈ ಬಿಟ್ಟು 8 ವಿಷಯಗಳ ಹೊಸ ಕ್ಯಾರಿ ಓವರ್ ಪದ್ದತಿಯನ್ನು ನೂತನ ಸಚಿವರು ಜಾರಿಗೊಳಿಸಿರುವುದರಿಂದ ಸುಮಾರು 70 ಪ್ರತಿಶತ ವಿದಾರ್ಥಿಗಳ ಬದುಕು ಡೋಲಾಯಮಾನವಾಗಿದೆ.
ಇತ್ತೀಚೆಗೆ ಐಟಿಐ ವಿದ್ಯಾರ್ಥಿಗಳಿಗೆ ಸಚಿವರು ಹೊಸ ಆದೇಶ ಹೊರಡಿಸಿ 11 ವಿಷಯಗಳ ಕ್ಯಾರಿ ಓವರ್ ಪದ್ಧತಿ ಜಾರಿಗೊಳಿಸಿದ್ದಾರೆ.ಡಿಪ್ಲೊಮಾ ವಿದ್ಯಾರ್ಥಿಗಳಿಗೂ ಕನಿಷ್ಠ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿಯಾದರು ಹಳೆಯ ಕ್ಯಾರಿ ಓವರ್ ಪದ್ಧತಿ ಜಾರಿಗೊಳಿಸಬೇಕೆಂದು ಜೈ ಕರವೇ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಗನ್ನಾಥ ಪಟ್ಟಣಶೆಟ್ಟಿ, ಶಿವಲಿಂಗ ಹಳ್ಳಿ, ಧರ್ಮಸಿಂಗ್ ತಿವಾರಿ ಹಾಗೂ ಚೆನ್ನು ಮರಬಒತ್ತಾಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.