ಗುರುವಾರ , ಆಗಸ್ಟ್ 22, 2019
26 °C

ಡಿಪ್ಲೋಮಾದಿಂದ ನೇರ ಎಂಜಿನಿಯರಿಂಗ್: 5,6 ರಂದು ಕೌನ್ಸೆಲಿಂಗ್

Published:
Updated:

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜುಗಳ ನೇರ ಪ್ರವೇಶಕ್ಕೆ ಅರ್ಹ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸೋಮವಾರ ಮತ್ತು ಮಂಗಳವಾರ ಎರಡನೆಯ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟು 13,290 ಸೀಟುಗಳಿಗೆ ಈ ಕೌನ್ಸೆಲಿಂಗ್ ನಡೆಯಲಿದೆ.ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಮಂಗಳವಾರ ರಾತ್ರಿ 10 ಗಂಟೆವರೆಗೆ ಅರ್ಹ ಡಿಪ್ಲೊಮಾ ವಿದ್ಯಾರ್ಥಿಗಳು, ಸೀಟು ಆಯ್ಕೆ ಮಾಡಿಕೊಳ್ಳಬಹುದು. ಸೀಟು ಹಂಚಿಕೆ ಪಟ್ಟಿಯನ್ನು ಬುಧವಾರ ಸಂಜೆ 5 ಗಂಟೆಯ ನಂತರ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.ವಿದ್ಯಾರ್ಥಿಗಳಿಗೆ ಎರಡನೆಯ ಸುತ್ತಿನಲ್ಲಿ ಯಾವುದೇ ಸೀಟು ಲಭ್ಯವಾಗದಿದ್ದರೆ, ಮೊದಲ ಸುತ್ತಿನಲ್ಲಿ ದೊರೆತ ಸೀಟು ಖಾತ್ರಿಯಾಗುತ್ತದೆ. ಮೊದಲ ಮತ್ತು ಎರಡನೆಯ ಸುತ್ತಿನಲ್ಲಿ ಸೀಟು ಗಿಟ್ಟಿಸಿಕೊಂಡವರು, ತಮಗೆ ಸೀಟು ದೊರೆತ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರವೇಶ ಪಡೆದುಕೊಳ್ಳಬೇಕು. ಇಲ್ಲವಾದರೆ ಅವರಿಗೆ ನೀಡಿರುವ ಸೀಟನ್ನು ರದ್ದು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Post Comments (+)