ಡಿವಿಎಸ್‌ರಿಂದ ಎಚ್‌ಡಿಕೆ ರಕ್ಷಣೆ: ಆರೋಪ

7

ಡಿವಿಎಸ್‌ರಿಂದ ಎಚ್‌ಡಿಕೆ ರಕ್ಷಣೆ: ಆರೋಪ

Published:
Updated:

ಬೆಂಗಳೂರು: `ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ತಮ್ಮ ಜಾತಿಯವರಾದ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ~ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆರೋಪಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಗೆ ಮಾಹಿತಿ ನೀಡುವಲ್ಲಿ ಮುಖ್ಯಮಂತ್ರಿ ಅವರು ನಿಖರ ಮತ್ತು ಸ್ಪಷ್ಟವಾದ ಮಾಹಿತಿ ನೀಡದೆ, ತಪ್ಪು ಮಾಹಿತಿ ನೀಡಿದ್ದಾರೆ. ಸಿಇಸಿಗೆ ಮೇ 22 ರಂದು ವರದಿ ನೀಡಿದ್ದರೂ ಸಹ, ಮೇ 23ರಂದು ಬಿಜೆಪಿ ನಾಯಕರು ಈ ಬಗ್ಗೆ ಪ್ರಶ್ನಿಸಿದಾಗ ಸತ್ಯವನ್ನು ಹೇಳದೆ, ಇನ್ನು ಮೇಲೆ ಮಾಹಿತಿಯನ್ನು ನೀಡಬೇಕೆಂದು ಹೇಳಿದ್ದಾರೆ~ ಎಂದರು.`ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗೆಗೆ ಸಿಇಸಿ ವರದಿ ಕೇಳಿದಾಗ ನಾಲ್ಕು ದಿನಗಳಲ್ಲಿ ಮಾಹಿತಿ ನೀಡಿದ್ದರು. ಆದರೆ ಅವರ ಜಾತಿಯ ಮಾಜಿ ಮುಖ್ಯಮಂತ್ರಿಗಳ ವಿಚಾರದಲ್ಲಿ ಕಾಲಹರಣ ಮಾಡಿದ್ದಲ್ಲದೇ, ತಪ್ಪು ಮಾಹಿತಿಯನ್ನು ನೀಡಿದ್ದಾರೆ~ ಎಂದು ಆರೋಪಿಸಿದರು.`ಗೃಹ ಸಚಿವ ಆರ್.ಅಶೋಕ ಮತ್ತು ಸದಾನಂದಗೌಡ ಇವರಿಬ್ಬರೂ ಕೃಷ್ಣ ಮತ್ತು ಕುಮಾರಸ್ವಾಮಿ ಅವರನ್ನು ಉಳಿಸುವ ತಂತ್ರವನ್ನು ಹೂಡುತ್ತಿದ್ದಾರೆ~ ಎಂದರು.`ಇದರ ಕುರಿತು ಮುಖ್ಯಮಂತ್ರಿ ಅವರನ್ನು ಕೇಳಿದಾಗ ಮಾಜಿಮುಖ್ಯ ಮಂತ್ರಿಗಳ ತನಿಖೆ ಮಾಡಬೇಕೆಂದು ಲೋಕಾಯುಕ್ತ ವರದಿಯಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ ಎಂದು ಸಬೂಬು ನೀಡುತ್ತಾರೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry