ಬುಧವಾರ, ಜೂನ್ 16, 2021
21 °C

ಡಿವಿಎಸ್ ಚೊಚ್ಚಲ ಬಜೆಟ್ ಮಂಡನೆ, ಕೃಷಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು : ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತಮ್ಮ ಚೊಚ್ಚಲ ಮುಂಗಡಪತ್ರವನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮೊದಲಿಗೆ ಕೃಷಿ ಮುಂಗಡಪತ್ರ ಹಾಗೂ ನಂತರ ಸಾಮಾನ್ಯ ಮುಂಗಡಪತ್ರವನ್ನು ಮಂಡಿಸಿದ ಅವರು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ಗಾತ್ರದ ಮುಂಗಡಪತ್ರ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.

1,02,742 ಕೋಟಿ ರೂ ಗಾತ್ರದ ಬಜೆಟ್‌ನಲ್ಲಿ ಕೃಷಿ ಪಡೆದಿರುವ ಪಾಲು 2,921 ಕೋಟಿ, ಸಾವಯವ ಕೃಷಿ 200 ಕೋಟಿ, ತೋಟಗಾರಿಕೆ 867 ಕೋಟಿ, ರೇಷ್ಮೆ ಇಲಾಖೆ 293 ಕೋಟಿ, ಮೀನುಗಾರಿಕೆ 215 ಕೋಟಿ ರೂ ಪಡೆದಿದೆ.ಮಂಡ್ಯದಲ್ಲಿರುವ ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಃಶ್ಚೇತನಕ್ಕೆ ಈ ಬಾರಿ 30 ಕೋಟಿ ನೀಡಲಾಗಿದೆ.ಬಾಗಲಕೋಟೆಯಲ್ಲಿ ದಾಳಿಂಬೆ ಅಭಿವೃದ್ಧಿ ಕೇಂದ್ರ, ಕೋಲಾರದಲ್ಲಿ ಮಾವು ಅಭಿವೃದ್ಧಿ ಕೇಂದ್ರ, ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್, ಬೆಳಗಾವಿಯಲ್ಲಿ ತರಕಾರಿ ಅಭಿವೃದ್ಧಿ ಕೇಂದ್ರ ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.ಅಥಣಿ, ಗದಗ, ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದರ ಜತೆಗೆ ಕೃಷಿ ವಿದ್ಯಾರ್ಥಿಗಳಿಗೆ 1500 ರೂ ಗೌರವ ಧನ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.10 ಹೆಚ್.ಪಿ. ಸಾಮರ್ಥ್ಯದ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ಶೇ. 4ರ ಬಡ್ಡಿದರದಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಿಕೆ ಇತ್ಯಾದಿ ಯೋಜನೆಗಳನ್ನು ಮುಖ್ಯಮಂತ್ರಿಗಳು ಮಂಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.