ಡಿವಿಎಸ್ ರಾಜೀನಾಮೆಗೆ ಮೊಯಿಲಿ ಆಗ್ರಹ

7

ಡಿವಿಎಸ್ ರಾಜೀನಾಮೆಗೆ ಮೊಯಿಲಿ ಆಗ್ರಹ

Published:
Updated:

ಮಂಗಳೂರು: ರಾಜ್ಯದಲ್ಲಿ ಬಿಜೆಪಿಯ ಆಂತರಿಕ ಕಲಹದಿಂದ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಸಲಹೆ ನೀಡಿದರು.ಜಿಲ್ಲೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭಾನುವಾರ ಆಗಮಿಸಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದ ಅಭಿವೃದ್ಧಿಗಿಂತ ಬಿಜೆಪಿಯಲ್ಲಿ ಪಕ್ಷದ ಗಲಾಟೆಯೇ ಜಾಸ್ತಿಯಾಗಿದೆ. ಇಂಥ ಸ್ಥಿತಿಯಲ್ಲಿ ಡಿವಿಎಸ್ ಹುದ್ದೆಯಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂದರು.  ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ, ಅನೈತಿಕತೆ, ಅಧರ್ಮ ಹೆಚ್ಚಾಗಿದೆ. ಬಿಜೆಪಿಗೆ ಪಾಠ ಕಲಿಸಲು ಈ ಚುನಾವಣೆ ಸುವರ್ಣಾವಕಾಶ. ಪ್ರತಿ ಚುನಾವಣೆ ಬಂದಾಗ ಬಿಜೆಪಿ ವಾಮಮಾರ್ಗ- ಕುತಂತ್ರದ ಮೂಲಕ ಗೆಲುವು ಸಾಧಿಸುತ್ತಿದೆ. ಈ ಬಾರಿಯೂ ಅದೇ ರೀತಿ ಮಾಡಲು ಪ್ರಯತ್ನಿಸಲಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದಿರಬೇಕು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry