ಡಿವಿಎಸ್ ರಾಜೀನಾಮೆ ನೀಡಲಿ: ಎಚ್‌ಡಿಕೆ

7

ಡಿವಿಎಸ್ ರಾಜೀನಾಮೆ ನೀಡಲಿ: ಎಚ್‌ಡಿಕೆ

Published:
Updated:

ಮಂಗಳೂರು:  ಪಕ್ಷದೊಳಗೆ ನಿರಂತರ ಆಂತರಿಕ ಕಚ್ಚಾಟದ ನಡುವೆ ಆಡಳಿತ ನಡೆಸುವ ಬದಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಾಜೀನಾಮೆ ನೀಡುವುದು ಒಳಿತು ಎಂದು ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ದಕ್ಷಿಣ ಕನ್ನಡ ಜಿಲ್ಲೆಯ ಜನ ಸ್ವಾಭಿಮಾನಿಗಳು. ಎಲ್ಲೇ ಹೋದರೂ ಗೌರವಯುತವಾಗಿ ಬದುಕಿದವರು. ಡಿವಿಎಸ್ ಸ್ವಾಭಿಮಾನದ ಸಂಕೇತವಾಗಬೇಕು. ರಾಜೀನಾಮೆ ನೀಡಿ ಜಿಲ್ಲೆಯ ಗೌರವ ಉಳಿಸಬೇಕು~ ಎಂದು ಕಿವಿಮಾತು ಹೇಳಿದರು.ಸರ್ಕಾರದ ಆಡಳಿತದಲ್ಲಿ ಜೆಡಿಎಸ್ ಹಸ್ತಕ್ಷೇಪವಿಲ್ಲ. ದೇವೇಗೌಡರ ಮಾರ್ಗದರ್ಶನದಂತೆ ಡಿವಿಎಸ್ ಕೆಲಸ ಮಾಡುತ್ತಾರೆ ಎಂಬುದು ಸುಳ್ಳು. ಅಂಥ ಒಂದು ಪ್ರಕರಣ ತೋರಿಸಿದರೂ ಆರೋಪಿಸುವವರಿಗೆ ತಲೆಬಾಗುವೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry