ಡಿವಿಎಸ್ ರಾಜೀನಾಮೆ: ಪ್ರತಿಭಟನೆ

ಸೋಮವಾರ, ಜೂಲೈ 22, 2019
27 °C

ಡಿವಿಎಸ್ ರಾಜೀನಾಮೆ: ಪ್ರತಿಭಟನೆ

Published:
Updated:

ಹೊಸಕೋಟೆ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ರಾಜೀನಾಮೆ ಪಡೆದಿರುವ ಬಿಜೆಪಿ ಹೈಕಮಾಂಡ್‌ನ ಕ್ರಮದ ವಿರುದ್ಧ ಹೊಸಕೋಟೆ ತಾಲ್ಲೂಕು ಕೆಂಪೇಗೌಡ ಒಕ್ಕಲಿಗರ ಸಂಘದ ಸದಸ್ಯರು ಹೊಸಕೋಟೆ- ಚಿಂತಾಮಣಿ ರಸ್ತೆಯ ಪಿಲ್ಲಗುಂಪೆ ಬಳಿ ಸೋಮವಾರ ರಸ್ತೆ ತಡೆ ನಡೆಸಿದರು.ಸುಮಾರು ಅರ್ಧ ಗಂಟೆ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದರು. `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಯಲ್ಲಿ ಜಾತಿ ರಾಜಕೀಯ ಹುಟ್ಟು ಹಾಕಿದ್ದಲ್ಲದೆ ಮುಖ್ಯಮಂತ್ರಿಗಳ ಪದಚ್ಯುತಿಗೆ ಪಿತೂರಿ ನಡೆಸಿದರು~ ಎಂದು ಪ್ರತಿಭಟನಾಕಾರರು ದೂರಿದರು.ಸಚಿವ ರೇಣುಕಾಚಾರ್ಯ, ವಿರುದ್ಧ ಧಿಕ್ಕಾರ ಕೂಗಿ ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಮುಖಂಡರಾದ ನಂಜುಂಡೇಗೌಡ, ಗಣೇಶ್‌ಗೌಡ, ಸತೀಶ್, ಹನುಮಂತರೆಡ್ಡಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry