ಬುಧವಾರ, ನವೆಂಬರ್ 13, 2019
24 °C
ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್

ಡಿವೈಎಸ್‌ಎಸ್‌ಗೆ ಗೆಲುವು

Published:
Updated:

ಬೆಂಗಳೂರು: ಮಂಡ್ಯದ ಡಿವೈಎಸ್‌ಎಸ್ ತಂಡ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಗುರುವಾರ 49-20 ಪಾಯಿಂಟ್‌ಗಳಿಂದ ವಿಮಾನಪುರ ಎದುರು ಗೆಲುವು ಸಾಧಿಸಿತು.ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಡಿವೈಎಸ್‌ಎಸ್ ತಂಡದ  ಆಕ್ಷಾ 14 ಪಾಯಿಂಟ್‌ಗಳನ್ನು ಕಲೆ ಹಾಕಿದರೆ, ಲೋಪಮುದ್ರ 10 ಅಂಕಗಳನ್ನು ಗಳಿಸಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಮೌಂಟ್ಸ್ ಕ್ಲಬ್ 45-29ರಲ್ಲಿ ವಿದ್ಯಾನಗರದ ಕ್ರೀಡಾ ಶಾಲೆಯನ್ನು ಸೋಲಿಸಿತು.ಬಾಲಕರ ವಿಭಾಗದ ಸ್ಪರ್ಧೆಗಳಲ್ಲಿ ಧಾರವಾಡದ ಭಾರತ ಕ್ರೀಡಾ ಪ್ರಾಧಿಕಾರ 49-33ರಲ್ಲಿ ಅಪ್ಪಯ್ಯ ಕ್ಲಬ್ ಮೇಲೂ, ಬೀಗಲ್ಸ್ ಕ್ಲಬ್ 56-33 ಅಂಕಗಳಿಂದ ಯಂಗ್ ಓರಿಯನ್ಸ್ ಎದೂರು ಗೆಲುವು ಸಾಧಿಸಿದವು.ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗಗಳ ಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿವೆ.

ಪ್ರತಿಕ್ರಿಯಿಸಿ (+)