ಡಿಸಿಎಚ್‌ಎಲ್‌ಗೆ ಮತ್ತೆ ಮೂರು ದಿನಗಳ ಅವಕಾಶ

7

ಡಿಸಿಎಚ್‌ಎಲ್‌ಗೆ ಮತ್ತೆ ಮೂರು ದಿನಗಳ ಅವಕಾಶ

Published:
Updated:

 ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) 100 ಕೋಟಿ ರೂ. ಮೊತ್ತದ ಬ್ಯಾಂಕ್ ಗ್ಯಾರಂಟಿ ನೀಡಬೇಕಿರುವ ಡೆಕ್ಕನ್     ಕ್ರಾನಿಕಲ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಡಿಸಿಎಚ್‌ಎಲ್) ಮೂರು ದಿನಗಳ ಹೆಚ್ಚಿನ ಕಾಲಾವಕಾಶ ಪಡೆದಿದೆ.ಷರತ್ತುರಹಿತ ಹಾಗೂ ಹಿಂಪಡೆಯಲಾಗದ ರೀತಿಯಲ್ಲಿ ಅಕ್ಟೋಬರ್ 9ರ ಒಳಗಾಗಿ ಬಿಸಿಸಿಐಗೆ 100 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡುವಂತೆ ಬಾಂಬೆ ಹೈಕೋರ್ಟ್ ಅ. 1 ರಂದು ಡಿಸಿಎಚ್‌ಎಲ್‌ಗೆ ಸೂಚಿಸಿತ್ತು.ಈ ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿ ಡಿಸಿಎಚ್‌ಎಲ್ ಮಂಗಳವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿದ     ಹೈಕೋರ್ಟ್ ಮತ್ತೆ ಮೂರು ದಿನಗಳ ಅವಕಾಶ ನೀಡಿದೆ. ಇದೀಗ ಡಿಸಿಎಚ್‌ಎಲ್ ಶುಕ್ರವಾರದ ಒಳಗಾಗಿ ಬ್ಯಾಂಕ್ ಗ್ಯಾರಂಟಿ ನೀಡಬೇಕು.ಬಿಸಿಸಿಐ ಸೆಪ್ಟೆಂಬರ್‌ನಲ್ಲಿ ಐಪಿಎಲ್ ತಂಡ ಡೆಕ್ಕನ್ ಚಾರ್ಜರ್ಸ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿತ್ತು. ತಂಡದ ಒಡೆತನ ಹೊಂದಿರುವ ಡಿಸಿಎಚ್‌ಎಲ್ ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry