ಡಿ.ಸಿಗೆ ವಿಶ್ವಕರ್ಮ ಸಮುದಾಯದ ಮನವಿ

7
ಪ್ರವರ್ಗ 1ಕ್ಕೆ ಸೇರಿಸಲು ಒತ್ತಾಯ

ಡಿ.ಸಿಗೆ ವಿಶ್ವಕರ್ಮ ಸಮುದಾಯದ ಮನವಿ

Published:
Updated:

ರಾಮನಗರ: ವಿಶ್ವಕರ್ಮ ಜನಾಂಗ ವನ್ನು ಪ್ರವರ್ಗ 1ಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ  ರಾಜ್ಯ ವಿಶ್ವ ಕರ್ಮ ಮಹಾ ಮಂಡಲದ ಪದಾಧಿ ಕಾರಿಗಳು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.ಮನವಿ ಸಲ್ಲಿಸಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಮಹಾ ಮಂಡಲದ ರಾಜ್ಯ ಘಟಕದ ಅಧ್ಯಕ್ಷ ಎಲ್.ನಾಗರಾಜಾಚಾರ್, ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಯಡಿ ಜನಾಂಗಕ್ಕೆ ಸೌಲಭ್ಯ ಒದಗಿಸ ಬೇಕು ಎಂದು ಒತ್ತಾಯಿಸಿದರು.ಈ ಯೋಜನೆಯಡಿ ಕುಶಲಕರ್ಮಿ ಗಳ ವಿಶೇಷ ಅನುದಾನದಲ್ಲಿ ಕುಶಲ ಕರ್ಮಿ ಗಳು ಮನೆ ನಿರ್ಮಿಸಿಕೊಳ್ಳಲು ತಲಾ 1 ಲಕ್ಷ ರೂ.ಗಳ ಅನುದಾನವನ್ನು ಸರ್ಕಾರ 2007ರಲ್ಲೇ ಬಿಡುಗಡೆ ಮಾಡಿದೆ.ರಾಮನಗರ ಜಿಲ್ಲೆಯ 280 ಫಲಾ ನುಭವಿಗಳು ಈ ಸೌಲಭ್ಯದಡಿ ಅರ್ಜಿ ಸಲ್ಲಿಸಿದ್ದರೂ ಉಪಯೋಗ ವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಜಿಲ್ಲಾಧಿ ಕಾರಿಗಳು ತಕ್ಷಣ ಜಿ.ಪಂ. ಸಿಇಓ, ತಾ. ಪಂ. ಇಓಗಳು, ಗ್ರಾ..ಪ ಂ. ಕಾರ್ಯ ದರ್ಶಿಗಳು, ಪಿಡಿಓಗಳು ಮತ್ತು ಸಂಬಂ ಧಿಸಿದ ಅಧಿಕಾರಿಗಳ ಸಭೆ ಕರೆದು ಫಲಾ ನುಭವಿಗಳ ಪಟ್ಟಿ  ಸಿದ್ಧಪಡಿಸು ವಂತೆ ಸೂಚಿಸಬೇಕು ಎಂದು ವಿನಂತಿಸಿರುವು ದಾಗಿ ಅವರು ತಿಳಿಸಿದರು.ಹಾವೇರಿ ಮತ್ತು ಗದಗ ಜಿಲ್ಲಾಧಿ ಕಾರಿಗಳಿಗೆ ಇದೇ ರೀತಿ ಮನವಿ ಸಲ್ಲಿಸಿದ ನಂತರ ಆ ಜಿಲ್ಲೆಗಳಲ್ಲಿ ಕ್ರಮವಾಗಿ 750 ಮತ್ತು 1544 ಫಲಾನು ಭವಿಗಳಿಗೆ ಸೌಲಭ್ಯ ದೊರೆತಿದೆ ಎಂದು ಮಾಹಿತಿ ನೀಡಿದರು.ವಿಶ್ವಕರ್ಮ  ಜನಾಂಗದ ಶೈಕ್ಷಣಿಕ ಚಟುವಟಿಕೆಗಳಿಗೆ ಅನುವಾಗುವಂತೆ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 1 ಎಕರೆ ಭೂಮಿ ಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಬಡಗಿ, ಕಮ್ಮಾರಿಕೆ, ಎರಕದ ಕೆಲಸ, ಚಿನ್ನ ಬೆಳ್ಳಿ ಕೆಲಸ, ಕೆತ್ತನೆ ವೃತ್ತಿಗಳಲ್ಲಿ ವಂಶಪಾರಂಪರಿಕಾಗಿ  ಬಂದಿರುವ ಈ ಜನಾಂಗದ ಏಳಿಗೆಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿ ಸಲು ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗು ತ್ತಿದೆ. ಇದಕ್ಕೆ ಸ್ಪಂದಿಸಿರುವ   ಸರ್ಕಾರ ಆಯವ್ಯಯದಲ್ಲಿ 5 ಕೋಟಿ ರೂ. ಮೀಸಲಿಟ್ಟಿದೆ. ಆದರೆ ಈ ಮೊತ್ತ ಸಾಕಾ ಗುವುದಿಲ್ಲ. ಕನಿಷ್ಠ 50 ಕೋಟಿ ರೂ. ಗಳನ್ನು ಒದ ಗಿಸಿಕೊಡ ಬೇಕು ಎಂದು ಮನವಿ ಸಲ್ಲಿ ಸಲಾಗಿದೆ ಎಂದರು.ರಾಜ್ಯ ವಿಶ್ವಕರ್ಮ ಮಹಾಮಂಡ ಳದ ಜಂಟಿ ಕಾರ್ಯದರ್ಶಿ ನಾಗೇಶ್, ಉತ್ತ ರಹಳ್ಳಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕನಕಪುರ ತಾಲೂಕು ಘಟಕದ ಅಧ್ಯಕ್ಷ ಬಿ.ಚಂದ್ರಾಚಾರ್, ಕಾರ್ಯಾಧ್ಯಕ್ಷ ದೊಡ್ಡ ಶಾಮಾಚಾರ್, ಪ್ರಮುಖರಾದ ಜಯರಾಮಾಚಾರ್, ದೊಡ್ಡಾಚಾರಿ, ಶಿವರುದ್ರಾಚಾರ್, ವೀರಭದ್ರಾಚಾರ್, ಚನ್ನಚಾರ್, ನಾಗರಾಜ್, ಪರಮೇಶ್ವರ್  ಹಾಗೂ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry