ಗುರುವಾರ , ನವೆಂಬರ್ 14, 2019
18 °C

`ಡಿಸಿಬಿ' ಲಾಭ ರೂ 102ಕೋಟಿ

Published:
Updated:

ಬೆಂಗಳೂರು: `ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್ ಲಿ.' (ಡಿಸಿಬಿ) 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ34 ಕೋಟಿ ನಿವ್ವಳ ಲಾಭ ಗಳಿಸಿದೆ. 2011-12ರ ಜನವರಿ-ಮಾರ್ಚ್ ಅವಧಿಯಲ್ಲಿನ ನಿವ್ವಳ ಲಾಭ ರೂ17ಕೋಟಿಗೆ ಹೋಲಿಸಿದಲ್ಲಿ ಈ ಬಾರಿ ಉತ್ತಮ ಪ್ರಗತಿ ದಾಖಲಾಗಿದೆ.ಒಟ್ಟು ಹಣಕಾಸು ವರ್ಷದಲ್ಲಿನ ನಿವ್ವಳ ಲಾಭವೂ ರೂ102 ಕೋಟಿಯಷ್ಟಾಗಿದೆ. ಹಿಂದಿನ ವರ್ಷದ ಲಾಭ ರೂ55 ಕೋಟಿಯಷ್ಟಿತ್ತು ಎಂದು `ಡಿಸಿಬಿ' ವ್ಯವಸ್ಥಾಪಕ ನಿರ್ದೇಶಕ ಮುರಳಿ ಎಂ.ನಟರಾಜನ್ ಹೇಳಿದ್ದಾರೆ.ಮಾರ್ಚ್ 31ರ ವೇಳೆಗೆ ಬ್ಯಾಂಕ್‌ನ ಠೇವಣಿ ಮೊತ್ತ ರೂ8364 ಕೋಟಿ (ಶೇ 32 ಹೆಚ್ಚಳ), ಸಾಲ ವಿತರಣೆ ರೂ6586 ಕೋಟಿ (ಶೇ 25 ಅಧಿಕ) ಇದ್ದಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)