ಡಿಸಿಯಾಗಿ ಶುಕ್ಲಾ ಅಧಿಕಾರ ಸ್ವೀಕಾರ

ಸೋಮವಾರ, ಮೇ 27, 2019
21 °C

ಡಿಸಿಯಾಗಿ ಶುಕ್ಲಾ ಅಧಿಕಾರ ಸ್ವೀಕಾರ

Published:
Updated:

ಧಾರವಾಡ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಸಮೀರ ಶುಕ್ಲಾ ಸೋಮವಾರ ಪ್ರಭಾರ ಜಿಲ್ಲಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಮೇಘಣ್ಣವರ ಅವರಿಂದ ಅಧಿಕಾರ ವಹಿಸಿಕೊಂಡರು.ಉತ್ತರ ಪ್ರದೇಶ ರಾಜ್ಯದವರಾದ ಶುಕ್ಲಾ 2005 ಬ್ಯಾಚ್‌ನ (ಕರ್ನಾಟಕ ಸೇವೆ) ಐಎಎಸ್ ಅಧಿಕಾರಿ. ಬೀದರನಲ್ಲಿ ಉಪವಿಭಾಗಾಧಿಕಾರಿ ಯಾಗಿ ಸೇವೆ ಆರಂಭಿಸಿ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಿದರು. ಇಲ್ಲಿಗೆ ಆಗಮಿಸುವ ಮುನ್ನ ಬೀದರ್ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ದರ್ಪಣ ಜೈನ್ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ಬಡ್ತಿ ಪಡೆದ ಹಿನ್ನೆಲೆಯಲ್ಲಿ ತೆರವಾದ ಜಿಲ್ಲಾಧಿಕಾರಿ ಸ್ಥಾನವನ್ನು ತುಂಬಿರುವ ಶುಕ್ಲಾ ಎಲೆಕ್ಟ್ರಾನಿಕ್ಸ್ ಟೆಲಿಕಾಂ ಎಂಜಿನಿಯ ರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.ಅಧಿಕಾರ ಸ್ವೀಕರಿಸಿದ ಬಳಿಕ ಸಿಎಂ ಜಂಟಿ ಕಾರ್ಯದರ್ಶಿ ದರ್ಪಣ ಜೈನ್ ಅವರೊಂದಿಗೆ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.ಬೀದರ್ ಜಿಲ್ಲಾಧಿಕಾರಿಗಳ ಅಧಿಕೃತ ಕಾರಿನಲ್ಲೇ ಶುಕ್ಲಾ ಅವರು ಧಾರವಾಡಕ್ಕೆ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry