ಡಿಸಿಸಿ ಸಭೆಗಳಿಗೆ ಪರಮೇಶ್ವರ್‌

7

ಡಿಸಿಸಿ ಸಭೆಗಳಿಗೆ ಪರಮೇಶ್ವರ್‌

Published:
Updated:

ಬೆಂಗಳೂರು: ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಗಳಲ್ಲಿ ಖುದ್ದಾಗಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತೀರ್ಮಾನಿಸಿದ್ದಾರೆ.ಆರಂಭದಲ್ಲಿ ನಾಲ್ಕು ಕಂದಾಯ ವಿಭಾಗಗಳ ತಲಾ ಒಂದು ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿ ಕೆಪಿಸಿಸಿ ಅಧ್ಯಕ್ಷರು ಭಾಗವಹಿಸುವರು. ಬೆಳಗಾವಿ­ಯಲ್ಲಿ ಸೆ.18ರಂದು ನಡೆ­ಯುವ ಕಾರ್ಯ­ಕಾರಿಣಿಯಲ್ಲಿ ಅವರು ಭಾಗ­ವಹಿ­ಸುವರು. ನಂತರ ಸೆ.23ರಂದು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾರ್ಯ­ಕಾರಿಣಿಯಲ್ಲಿ ಪಾಲ್ಗೊ­ಳ್ಳು­ವರರು ಎಂದು ಪಕ್ಷದ ಮೂಲಗಳು ತಿಳಿಸಿವೆ.ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಸೂಚನೆಯಂತೆ ಪರ­ಮೇಶ್ವರ್‌ ಜಿಲ್ಲಾ ಸಮಿತಿಗಳ ಕಾರ್ಯ­ಕಾರಿಣಿಯಲ್ಲಿ ಪಾಲ್ಗೊಳ್ಳಲು ಮುಂದಾ­ಗಿದ್ದಾರೆ. ಎಲ್ಲಾ ಜಿಲ್ಲಾ ಕಾಂಗ್ರೆಸ್‌ ಸಮತಿ­ಯ ಪದಾಧಿ­ಕಾರಿಗಳನ್ನು ಭೇಟಿಮಾಡಿ ಪಕ್ಷ ಸಂಘ­ಟನೆಗೆ ಉತ್ತೇಜಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಯೋಚಿ­ಸಿ­ದ್ದಾರೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry