ಡಿ.ಸಿ ಅಪಹರಣ ಪ್ರಕರಣ ಸುಖಾಂತ್ಯ

7

ಡಿ.ಸಿ ಅಪಹರಣ ಪ್ರಕರಣ ಸುಖಾಂತ್ಯ

Published:
Updated:

ಭುವನೇಶ್ವರ (ಪಿಟಿಐ): ಒಡಿಶಾದ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ವಿನೀಲ್ ಕೃಷ್ಣ ಅವರ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. 9 ದಿನಗಳಿಂದ ತಮ್ಮ ವಶದಲ್ಲಿದ್ದ ಕೃಷ್ಣ ಅವರನ್ನು ನಕ್ಸಲೀಯರು ಗುರುವಾರ ಸಂಜೆ ಬಿಡುಗಡೆ ಮಾಡಿದ್ದಾರೆ.ಅಧಿಕಾರಿಗಳನ್ನು ಅಪಹರಿಸಿದ್ದ ಚಿತ್ರಕೊಂಡ ಪ್ರದೇಶದ ಹಳ್ಳಿಯೊಂದರ ಬಳಿ ನಕ್ಸಲೀಯರು ಕೃಷ್ಣ ಅವರನ್ನು ಕೆಲ ಆಯ್ದ ಮಾಧ್ಯಮ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು ಎಂದು ಮೂಲಗಳು ತಿಳಿಸಿವೆ.ಮತ್ತೊಬ್ಬ ಅಪಹೃತ ಕಿರಿಯ ಎಂಜಿನಿಯರ್ ಪವಿತ್ರ ಮಝಿ ಅವರನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry