ಡಿಸಿ ಆದೇಶಕ್ಕೆ ಬೆಲೆ ಇಲ್ಲ..!

7

ಡಿಸಿ ಆದೇಶಕ್ಕೆ ಬೆಲೆ ಇಲ್ಲ..!

Published:
Updated:
ಡಿಸಿ ಆದೇಶಕ್ಕೆ ಬೆಲೆ ಇಲ್ಲ..!

ಶಹಾಪುರ: ತಾಲ್ಲೂಕಿನ ಗೋಗಿಯಲ್ಲಿರುವ ಆದಿಲ್ ಶಾಹಿ ದೊರೆಗಳ ಸಮಾಧಿಗಳು ರಾಜ್ಯ ಸರ್ಕಾರದ ಸಂರಕ್ಷಿತ ಸ್ಮಾರಕಗಳಾಗಿವೆ. ಸ್ಮಾರಕಗಳ ಒಳಗೆ ಹಾಗೂ ಹೊರಗೆ ಗೋಗಿಯವರಾದ ಸೈಯ್ಯದ ಆಲಮನ್ ಹುಸೇನಿ ಸಜ್ಜಾದ ಮತ್ತು ಸೈಯ್ಯದ ಅರಿಫುಲ್ಲಾ ಹುಸೇನಿ ಸಜ್ಜಾದ ಇವರು ಆತಿಕ್ರಮಣ ಮಾಡಿದ್ದಾರೆ  ಹಾಗೂ ಉಲ್ಲಂಘಿಸಿದ್ದಾರೆ.

ಸರ್ಕಾರ ಆದೇಶದ ಪ್ರಕಾರ 100 ಮೀಟರ ಹಾಗೂ ಅದರ ಸುತ್ತಮುತ್ತ 200ಮೀಟರ್ ಅಂತರದಲ್ಲಿನ ಪ್ರದೇಶವನ್ನು ಯಾವುದೇ ನಿರ್ಮಾಣದ ಉದ್ದೇಶಕ್ಕೆ ನಿಷೇಧಿತ ಹಾಗೂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಬೇಕೆಂದು ಸೂಚಿಸಿ ಸೂಕ್ತ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಎಸ್ಪಿ ಹಾಗೂ ತಹಸೀಲ್ದಾರರಿಗೆ ನೀಡಿದ ಆದೇಶವನ್ನು ಕಸದ ಬುಟ್ಟಿಗೆ ಎಸೆದ ಅಂಶ ಬೆಳಕಿಗೆ ಬಂದಿದೆ.

ಅಲ್ಲದೆ ಚಂದಾಹುಸೇನಿ ದರ್ಗಾವು ವಕ್ಫಬೋರ್ಡ್‌ಗೆ  ಸಂಬಂಧಿಸಿದ್ದಿರುತ್ತದೆ ಎಂದು ತಿಳಿದು ಬಂದಿದೆ. ಕಾನೂನು ಪ್ರಕಾರ ಒತ್ತುವರಿದಾರರಿಗೆ ನೋಟಿಸು ನೀಡಲು ಸೂಚಿಸಿದೆ. ಏನಾದರು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಸಹಕಾರ ಬೇಕಾದರೆ ಸೂಕ್ತ ಕ್ರಮಕ್ಕಾಗಿ ಸಹಕಾರ ನೀಡಲಾಗುವುದೆಂದು ಡಿಸಿಯವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇಂದಿಗೂ ವಕ್ಫಬೋರ್ಡ್, ತಹಸೀಲ್ದಾರರಾಗಲಿ, ಜಿಲ್ಲಾ ಎಸ್ಪಿಯವರಾಗಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ಜಾಣ ಕಿವುಡರಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಹ್ಮದ ಜಿಲಾನಿ ಶೇಖಜಿ ದೂರಿದ್ದಾರೆ.

15ನೇ ಶತಮಾನದಲ್ಲಿದ್ದ ಸೂಫಿ ಸಂತ ಹಜರತ್ ಚಂದಾಹುಸೇನಿಯ ಆರಾಧಕರಾಗಿದ್ದ ಆದಿಲ್‌ಶಾಹಿ ಚಕ್ರವರ್ತಿಗಳ ಸಮಾಧಿ ಹೊಂದಿರುವ ದರ್ಗಾದ ಸುತ್ತಮುತ್ತ ಹಾಗೂ ಹೆಬ್ಬಾಗಿಲು ಅಕ್ಕಪಕ್ಕದಲ್ಲಿ ಕಲಾತ್ಮಕ ಕಮಾನುಗಳನ್ನು ಕೆಲ ವ್ಯಕ್ತಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ವರ್ಷದ ಹಿಂದೆ ದೂರು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry