ಸೋಮವಾರ, ಮೇ 10, 2021
21 °C

ಡಿಸಿ ಕಚೇರಿ ಎದುರು ಮೀನುಗಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಆಲೂರು ತಾಲ್ಲೂಕಿನ ವಾಟೆ ಹೊಳೆ ಜಲಾಶಯದಲ್ಲಿ ಸ್ಥಳೀಯ ಮೀನುಗಾರರು ಅನುಭವಿಸುತ್ತಿರುವ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮೀನುಗಾರರು ಹಾಸನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ವಾಟೆಹೊಳೆ ಜಲಾಶಯದ ಮೀನುಗಾ ರರು, ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿದರು. ವಾಟೆಹೊಳೆದಲ್ಲಿ ಕಳೆದ ಹಲವಾರು ವರ್ಷಗಳಿಂದ ಮೀನು ಗಾರಿಕೆ ನಡಸಿಕೊಂಡು ಜೀವನ ಸಾಗಿಸುತ್ತಿರುವ ಸುಮಾರು ಐವತ್ತು ಕುಟುಂಬಗಳು ಬೀದಿಗೆ ಬಿದ್ದಿವೆ. ಮೀನುಗಾರಿಕೆ ಮಹಾಮಂಡಳಿ ವಹಿಸಿ ರುವ ಬೇಜವಾಬ್ದಾರಿಯೇ ಇದಕ್ಕೆಲ್ಲ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಮೀನು ಹಿಡಿದು ಮಾರಾಟ ಮಾಡುವ ಹಕ್ಕನ್ನು ಮೀನುಗಾರಿಕೆ ಮಹಾ ಮಂಡಳಿಗೆ ಸರ್ಕಾರ ವಹಿಸಿದ ನಂತರ ಈ ಎಲ್ಲಾ ಸಮಸ್ಯೆಗಳು ಉದ್ಬವಗೊಂಡಿವೆ. ಇದರಿಂದಾ ಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯ ಮೀನುಗಾರರು ನೀಡಿದ ದೂರಿನ ಹಿನ್ನೆಲೆಯಲ್ಲಿ ಗುತ್ತಿಗೆಯನ್ನು ಸರ್ಕಾರ ರದ್ದುಪಡಿಸಿತು.ಮೀನುಗಾರಿಕೆ ಮಹಾಮಂಡಳ ನ್ಯಾಯಾಲಯದ ಮೊರೆ ಹೋದ ನಂತರ ಗುತ್ತಿಗೆ ರದ್ದು ಪಡಿಸಿದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ನಂತರ ಇಬ್ಬರು ದಲ್ಲಾಳಿಗಳಿಗೆ ಮರು ಗುತ್ತಿಗೆ ನೀಡಿರುವ ಮಹಾ ಮಂಡಳ ಸ್ಥಳೀಯ ಮೀನುಗಾರರ ಹಿತ ಕಡೆಗಣಿಸಿದೆ ಎಂದು ಆರೋಪಿಸಿದು.ಕೂಡಲೇ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಪ್ರತಿಭಟನಾಕಾರು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.