ಶುಕ್ರವಾರ, ಜುಲೈ 30, 2021
23 °C
ಚುರುಕುಗೊಂಡ ಪರಿಹಾರ ಕಾರ್ಯ

ಡಿಸೆಂಬರ್‌ನಲ್ಲಿ ಕೇಂದ್ರೀಯ ವಿವಿಗೆ ರಾಷ್ಟ್ರಪತಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಡಿಸೆಂಬರ್‌ನಲ್ಲಿ ಆಗಮಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.‘ಘಟಿಕೋತ್ಸವವನ್ನು ಡಿಸೆಂಬರ್‌ನಲ್ಲಿ ನಡೆಸುವಂತೆ ಸೂಚನೆ ಬಂದಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಬರುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ನಿರ್ದಿಷ್ಟವಾದ ದಿನಾಂಕ ನಿಗದಿಯಾಗಿಲ್ಲ. ನ.15ರ ಒಳಗಾಗಿ ದಿನಾಂಕ ನೀಡಿದರೆ ಉತ್ತಮ ಎಂದು ಕೇಳಿಕೊಳ್ಳಲಾಗಿದೆ’ ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಎಂ.­ಎನ್‌.ಸುಧೀಂದ್ರರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲಾಧಿಕಾರಿ ವಿಪುಲ್‌ ಬನ್ಸಲ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ಬುಧವಾರ ಕ್ಯಾಂಪಸ್‌ಗೆ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಶೀಲಿಸಿದೆ.ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ವಿವಿಯಿಂದ ಯಾವುದೇ ಇಲಾಖೆಯ ನೆರವು ಕೋರಿದರೂ ತತ್‌ಕ್ಷಣದಲ್ಲಿ ನೆರವೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಅವರ ಮಾತಿನಿಂದ ಸಾಕಷ್ಟು ವಿಶ್ವಾಸ ಮೂಡಿದೆ ಎಂದರು.ಯಾವುದೇ ನೀರು ಇದ್ದರೂ, ಅದು ಕುಡಿಯಲು ಯೋಗ್ಯವೆ ಎಂಬುದನ್ನು ಪರೀಕ್ಷಿಸಲು ₨6 ಲಕ್ಷ ವೆಚ್ಚದಲ್ಲಿ ವಾಟರ್‌ ಟೆಸ್ಟಿಂಗ್‌ ಚಿಪ್‌ವೊಂದನ್ನು ಖರೀದಿಸ­ಲಾಗು­ತ್ತಿದೆ. ನೂತನ ಕ್ಯಾಂಪಸ್‌ನಿಂದ ಮೂರು ಕಿಲೋ ಮೀಟರ್‌ ದೂರದಲ್ಲಿ ಕೊಳವೆಬಾವಿಯೊಂದನ್ನು ಕೊರೆಯಲಾಗಿದ್ದು, ಅದರಲ್ಲಿ ಹೆಚ್ಚು ನೀರಿನ ಲಭ್ಯತೆ ಇದೆ.ಅಲ್ಲಿಂದ ನೀರು ಪೂರೈಸಲು ಪೈಪ್‌ಲೈನ್‌ ಕೆಲಸವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ತಿಳಿಸಿದರು. ರಾಷ್ಟ್ರಪತಿ ಭೇಟಿಯ ಹಿನ್ನೆಲೆಯಲ್ಲಿ ಕ್ಯಾಂಪಸ್‌ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತವು ಅದ್ಯತೆ ನೀಡಿ ಕೆಲಸ ಮಾಡುತ್ತಿದೆ. ನವೆಂಬರ್‌ 8ರಂದು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡವು ಮತ್ತೆ ಕ್ಯಾಂಪಸ್‌ಗೆ ಭೇಟಿ ನೀಡಿ, ಪರಿಹಾರ ಕಾರ್ಯಗಳನ್ನು ಪೂರ್ಣಗೊಳಿಸಿದ್ದರ ಬಗ್ಗೆ ಪರಿಶೀಲಿಸಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.