ಡಿಸೆಂಬರ್ 16ರಂದು ಆರ್ಚರಿ ಆಯ್ಕೆ ಟ್ರಯಲ್ಸ್

7

ಡಿಸೆಂಬರ್ 16ರಂದು ಆರ್ಚರಿ ಆಯ್ಕೆ ಟ್ರಯಲ್ಸ್

Published:
Updated:

ಬೆಂಗಳೂರು: ಕರ್ನಾಟಕ ಅಮೆಚೂರ್ ಆರ್ಚರಿ ಸಂಸ್ಥೆ ಬೆಂಗಳೂರಿನಲ್ಲಿ ಮುಂದಿನ ಜನವರಿ 15 ರಿಂದ 20ರ ವರೆಗೆ ನಡೆಯಲಿರುವ 33ನೇ ರಾಷ್ಟ್ರೀಯ ಸಬ್ ಜೂನಿಯರ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡದ ಆಯ್ಕೆಗೆ ಡಿಸೆಂಬರ್ 16 ರಂದು `ಟ್ರಯಲ್ಸ್' ನಡೆಸಲಿದೆ.ನಗರದ ಕಂಠೀರವ ಕ್ರೀಡಾಂಗಣದ ಆರ್ಚರಿ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ 8.30 ರಿಂದ ಟ್ರಯಲ್ಸ್ ಆರಂಭವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 1995ರ ಜನವರಿ 1 ಹಾಗೂ ಆ ಬಳಿಕ ಬಳಿಕ ಜನಿಸಿದವರು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹರು.ಕರ್ನಾಟಕ ಆರ್ಚರಿ ಸಂಸ್ಥೆಗೆ ನೋಂದಾಯಿತ ಸ್ಪರ್ಧಿಗಳು ತಮ್ಮ ಹೆಸರು ನೋಂದಾಯಿಸಬಹುದು. ವಿಳಾಸ: ಅನಂತರಾಜು, ಕಾರ್ಯದರ್ಶಿ, ಕರ್ನಾಟಕ ಅಮೆಚೂರ್ ಆರ್ಚರಿ ಸಂಸ್ಥೆ, ಕೊಠಡಿ ಸಂಖ್ಯೆ 3, ಸ್ಪೋರ್ಟ್ಸ್ ಅಥಾರಿಟಿ ಆಫ್ ಕರ್ನಾಟಕ ಕಟ್ಟಡ, ಕಂಠೀರವ ಕ್ರೀಡಾಂಗಣ ಕ್ರೀಡಾ ಸಂಕೀರ್ಣ, ಕಸ್ತೂರಬಾ ರಸ್ತೆ, ಬೆಂಗಳೂರು- 560001 (ದೂ: 22275656)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry